ಕರ್ನಾಟಕ

karnataka

ETV Bharat / briefs

ಬಾಡಿಗೆ ಪಡೆದ ಕಾರು ಮಾರಾಟ ಮಾಡುತ್ತಿದ್ದ ಕಿರಾತಕ ಗ್ಯಾಂಗ್​ ಅರೆಸ್ಟ್​ - Car Robbery news

ಬಾಡಿಗೆಗೆ ತೆಗೆದುಕೊಂಡ ಕಾರು ಮಾರಾಟ ಮಾಡುತ್ತಿದ್ದ ಕಿರಾತಕ ಗ್ಯಾಂಗ್​ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

 ಕಿರಾತಕ ಗ್ಯಾಂಗ್​ ಅರೆಸ್ಟ್​
ಕಿರಾತಕ ಗ್ಯಾಂಗ್​ ಅರೆಸ್ಟ್​

By

Published : Jun 14, 2021, 10:42 PM IST

ಹೈದರಾಬಾದ್​: ಬಾಡಿಗೆ ಆಧಾರದ ಮೇಲೆ ತೆಗೆದುಕೊಂಡ ಕಾರುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಎಂಟೆಕ್ ಪದವೀಧರ ಸೇರಿದಂತೆ ಆರು ಜನರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಬಿಟೆಕ್ ಪದವೀಧರರು ಮತ್ತು ಸಾಮಾಜಿಕ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಯುವಕರು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಘಟನೆ ಬಗ್ಗೆ ಸೈಬರಾಬಾದ್ ಕಮಿಷನರ್ ವಿ.ಸಿ ಸಜ್ಜನರ್ ಮಾತನಾಡಿ, "ಮುಖ್ಯ ಆರೋಪಿ ಪಲ್ಲೆ ನರೇಶ್ ಕುಮಾರ್ ಎಂಬಾತ ಕಾರು ಮಾಲೀಕರು ಮತ್ತು ಟ್ರಾವೆಲ್ ಏಜೆನ್ಸಿಗಳಿಗೆ ಸುಳ್ಳು ಭರವಸೆಗಳನ್ನು ನೀಡಿ ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದರು. ಬಳಿಕ ಆ ವಾಹನಗಳನ್ನು ಮಾರಾಟ ಮಾಡುವುದು ಅಥವಾ ಅಡವು ಇಡುತ್ತಿದ್ದರು" ಎಂದರು.

ನರೇಶ್, ಇತರರ ಸಹಾಯದಿಂದ 272 ಕಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದನಂತೆ. ಆದರೆ, ಅದರಲ್ಲಿ 205 ಕಾರುಗಳ ಮಾಲೀಕರು ತಮ್ಮ ವಾಹನಗಳನ್ನು ವಾಪಸ್ ತೆಗೆದುಕೊಂಡಿದ್ದಾರೆ. ಸದ್ಯ ರಾಮಚಂದ್ರಪುರಂ ಪೊಲೀಸರು 50 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details