ಕರ್ನಾಟಕ

karnataka

ETV Bharat / briefs

ಚಂಡಮಾರುತಕ್ಕೆ ರಾಜಸ್ಥಾನ, ಗುಜರಾತ್​, ಎಂಪಿ ತತ್ತರ:  22 ಸಾವು, ಹಾರಿಹೋಯ್ತು ಮೋದಿ ಸಭೆಯ 'ಟೆಂಟ್'! - ಪರಿಹಾರ ನಿಧಿ

ಮಧ್ಯಪ್ರದೇಶದಲ್ಲಿ 16 ಜನ ಮೃತಪಟ್ಟಿದ್ದರೆ, ರಾಜಸ್ಥಾನದಲ್ಲಿ ಆರು ಮಂದಿ ಹಸುನಿಗಿದ್ದಾರೆ. ಉಳಿದಂತೆ ಗುಜರಾತ್​​ನಲ್ಲೂ ಕೆಲವರು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಹಾರಿಹೋಯ್ತು ಮೋದಿ ಸಭೆಯ 'ಟೆಂಟ್'!

By

Published : Apr 17, 2019, 11:08 AM IST

ನವದೆಹಲಿ: ಮಧ್ಯಪ್ರದೇಶ, ಗುಜರಾತ್​ ಹಾಗೂ ರಾಜಸ್ಥಾನದಲ್ಲಿ ಚಂಡಮಾರುತ ಅಬ್ಬರ ಜೋರಾಗಿದೆ. ಕಳೆದೆರಡು ದಿನಗಳಿಂದ ಬೀಸುತ್ತಿರುವ ಗಾಳಿಗೆ ಈಗಾಗಲೇ ಅನೇಕರು ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದಲ್ಲಿ 16 ಜನ ಸಾವನ್ನಪ್ಪಿದ್ದರೆ, ರಾಜಸ್ಥಾನದಲ್ಲಿ ಆರು ಮಂದಿ ಅಸುನಿಗಿದ್ದಾರೆ. ಉಳಿದಂತೆ ಗುಜರಾತ್​​ನಲ್ಲೂ ಕೆಲವರು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು ರ್ಯಾಲಿ ನಡೆಸಬೇಕಾಗಿದ್ದ ಹೀಮಂತ್​ನಗರದಲ್ಲಿ ನಿರ್ಮಾಣವಾಗಿದ್ದ ಟೆಂಟ್​​​ ಸಂಪೂರ್ಣವಾಗಿ ಚಂಡುಮಾರುತಕ್ಕೆ ಹಾರಿಹೋಗಿದೆ. ಹೀಗಾಗಿ ರ್ಯಾಲಿಯನ್ನ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಪ್ರಧಾನಿ ಮೋದಿ ಇಂದು ಗುಜರಾತ್​ನ ಮೂರು ಪ್ರದೇಶಗಳಲ್ಲಿ ಚುನಾವಣೆ ರ್ಯಾಲಿ ನಡೆಸಬೇಕಾಗಿತ್ತು. ಆದರೆ ಚಂಡಮಾರುತ ಉಂಟಾಗಿರುವ ಕಾರಣ, ಎರಡು ಕ್ಷೇತ್ರಗಳಲ್ಲಿ ರ್ಯಾಲಿ ನಡೆಸಲಿದ್ದಾರೆ.

ಇನ್ನು ಚಂಡಮಾರುತದಲ್ಲಿ ಗುಜರಾತ್​​ನಲ್ಲಿ ಸಾವನ್ನಪ್ಪಿರುವ ಕುಟುಂಬಕ್ಕೆ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2ಲಕ್ಷ ನೀಡಲಾಗಿದ್ದು, ಘಟನೆಯಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ ಪರಿಹಾರ ನೀಡಲಾಗಿದೆ. ಇನ್ನು ಇದೇ ವಿಷಯವಾಗಿ ಮಧ್ಯಪ್ರದೇಶ ಸಿಎಂ ಕಮಲನಾಥ್​ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಕೇವಲ ಗುಜರಾತ್​ಗೆ ಪ್ರಧಾನಿಯಲ್ಲ. ದೇಶದ ಪ್ರಧಾನಿ. ಮಧ್ಯಪ್ರದೇಶದಲ್ಲೂ ಅನೇಕ ಜನರು ಚಂಡಮಾರುತಕ್ಕೆ ಸಾವನ್ನಪ್ಪಿದ್ದು, ಅವರಿಗೆ ಪರಿಹಾರ ಯಾಕೆ ಘೋಷಣೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ABOUT THE AUTHOR

...view details