ಬಿಶ್ಕೆಕ್(ಕಿರ್ಗಿಸ್ತಾನ):ಮೊಂಡುತನ ಹಾಗೂ ಯಡವಟ್ಟುಗಳಿಂದ ಸುದ್ದಿಯಾಗುವ ಪಾಕ್ ಪ್ರಧಾನಿ ಮತ್ತದೇ ವಿಚಾರಕ್ಕೆ ಈಗ ಸುದ್ದಿಯಲ್ಲಿದ್ದಾರೆ. ವಿಶ್ವನಾಯಕರ ಮುಂದೆ ಇಮ್ರಾನ್ ಖಾನ್ ಸಣ್ಣತನ ತೋರಿದ್ದಾರೆ.
ಬಿಶ್ಕೆಕ್ನಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ ಉದ್ಘಾಟನೆ ವೇಳೆ ಎಲ್ಲ ಜಾಗತಿಕ ನಾಯಕರು ಆಗಮಿಸುತ್ತಿದ್ದಾಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಮಗೆ ಕಾಯ್ದಿರಿಸಲಾಗಿದ್ದ ಆಸನದಲ್ಲಿ ಕುಳಿತು ಅಗೌರವ ಸೂಚಿಸಿದ್ದಾರೆ.
ನಾಯಕರ ಆಗಮನದ ವೇಳೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದರು. ಆದರೆ, ಈ ಸಾಮನ್ಯ ಶಿಷ್ಟಾಚಾರ ಮರೆತ ಪಾಕ್ ಪ್ರಧಾನಿ ತಾವೊಬ್ಬರೇ ಕುಳಿತು ಅಗೌರವ ಸಲ್ಲಿಸಿದ್ದಾರೆ.
ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ- ಇನ್ಸಾಫ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇಮ್ರಾನ್ ಅಗೌರವದ ನಡೆ ಸ್ಪಷ್ಟವಾಗಿ ಕಾಣಿಸಿದೆ.
ಕೆಲ ದಿನಗಳ ಹಿಂದೆ ಇಮ್ರಾನ್ ಖಾನ್ ಸೌದಿ ರಾಜ ಸಲ್ಮಾನ್ರಿಗೆ ಅಗೌರವ ಸೂಚಿಸಿದ್ದು ಸುದ್ದಿಯಾಗಿತ್ತು. ಸೌದಿ ರಾಜನಿಗೆ ಸಮರ್ಪಕವಾಗಿ ಉತ್ತರಿಸದೇ ಪಾಕ್ ಪ್ರಧಾನಿ ಅಲ್ಲಿಂದ ತಕ್ಷಣವೇ ತೆರಳಿದ್ದರು.