ಕರ್ನಾಟಕ

karnataka

ETV Bharat / briefs

ಪಥ ಬದಲಿಸಿದ ವಾಯು ಸೈಕ್ಲೋನ್​​... ಗುಜರಾತ್​ಗಿಲ್ಲ ಚಂಡಮಾರುತದ ನೇರ ಹೊಡೆತ..!

ಕೆಲ ಹೊತ್ತಿನ ಮುಂಚೆ ಚಂಡಮಾರುತದ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆಯ ವಿಜ್ಞಾನಿ ಮನೋರಮಾ ಮೋಹಾಂತಿ, ವಾಯು ಸೈಕ್ಲೋನ್ ತನ್ನ ಪಥ ಬದಲಿಸಿದ್ದು ಗುಜರಾತ್​​ಗೆ ಅಪ್ಪಳಿಸುವುದಿಲ್ಲ ಎಂದಿದ್ದಾರೆ.

ವಾಯು ಸೈಕ್ಲೋನ್

By

Published : Jun 13, 2019, 9:18 AM IST

ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ವಾಯು ಸೈಕ್ಲೋನ್​ ಈ ಮೊದಲಿನ ಲೆಕ್ಕಾಚಾರದಂತೆ ಇಂದು ಮಧ್ಯಾಹ್ನದ ವೇಳೆಗೆ ಗುಜರಾತ್​​ ಕರಾವಳಿಗೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು.

ಕೆಲ ಹೊತ್ತಿನ ಮುಂಚೆ ಚಂಡಮಾರುತದ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ವಿಜ್ಞಾನಿ ಮನೋರಮಾ ಮೊಹಾಂತಿ, ವಾಯು ಸೈಕ್ಲೋನ್ ತನ್ನ ಪಥ ಬದಲಿಸಿದ್ದು, ಗುಜರಾತ್​​ಗೆ ಅಪ್ಪಳಿಸುವುದಿಲ್ಲ ಎಂದಿದ್ದಾರೆ. ಚಂಡಮಾರುತ ವೆರಾವಲ್, ಪೋರ್​ಬಂದರ್​ ಹಾಗೂ ದ್ವಾರಕ​ ಸಮೀಪದಲ್ಲಿ ಹಾದು ಹೋಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಗುಜರಾತ್​ ಕರಾವಳಿ ತೀರದಲ್ಲಿ ವಾಯು ಸೈಕ್ಲೋನ್​ ಹಾದುಹೋಗುವ ಪರಿಣಾಮ ಆ ಭಾಗಗಳಲ್ಲಿ ಅತಿಯಾದ ಗಾಳಿ ಹಾಗೂ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ವಾಯು ಚಂಡಮಾರುತ ಗುಜರಾತ್​ ಅಪ್ಪಳಿಸಲಿದೆ ಎನ್ನುವ ಹವಾಮಾನ ಇಲಾಖೆಯ ಮಾಹಿತಿ ಆಧಾರದಲ್ಲಿ ತೀರ ಪ್ರದೇಶದಲ್ಲಿ ವಾಸವಿದ್ದ ಮೂರು ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿತ್ತು. ’ವಾಯು’ ಚಂಡಮಾರುತದಿಂದ ಮಹಾರಾಷ್ಟ್ರ, ಲಕ್ಷದ್ವೀಪ, ಕರ್ನಾಟಕ, ಕೇರಳದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ABOUT THE AUTHOR

...view details