ಕರ್ನಾಟಕ

karnataka

ETV Bharat / briefs

ಮತ್ತೆ ವಕ್ಕರಿಸಿದ ಚಂಡಮಾರುತ...! ಇನ್ನೆರಡು ದಿನದಲ್ಲಿ ಗಾಂಧಿ ನಾಡಿಗೆ ಅಪ್ಪಳಿಸುವ ಸಾಧ್ಯತೆ - ವಾಯು ಚಂಡಮಾರುತ

ವಾಯು ಚಂಡಮಾರುತ ನೇರ ಪರಿಣಾಮ ಗುಜರಾತ್ ಮೇಲೆ ಆಗಲಿದ್ದು ಈ ನಿಟ್ಟಿನಲ್ಲಿ ಗುಜರಾತ್ ಕರಾವಳಿಯ ಪೋರಬಂದರ್​​​ ಹಾಗೂ ಮಹುವಾಗಳಲ್ಲಿ ನಿಗಾ ವಹಿಸಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಚಂಡಮಾರುತ

By

Published : Jun 11, 2019, 12:52 PM IST

ನವದೆಹಲಿ:ಮುಂಗಾರು ಆಗಮನದ ವೇಳೆಯಲ್ಲಿ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು ಪರಿಣಾಮ ವಾಯು ಚಂಡಮಾರುತ ಕಾಣಿಸಿಕೊಂಡಿದೆ.

ಚಂಡಮಾರುತ ನೇರ ಪರಿಣಾಮ ಗುಜರಾತ್ ಮೇಲೆ ಆಗಲಿದ್ದು ಈ ನಿಟ್ಟಿನಲ್ಲಿ ಗುಜರಾತ್ ಕರಾವಳಿಯ ಪೋರಬಂದರ್​​​ ಹಾಗೂ ಮಹುವಾಗಳಲ್ಲಿ ನಿಗಾ ವಹಿಸಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಚಂಡಮಾರುತದಿಂದ ಗುಜರಾತ್​​ನಲ್ಲಿ ಭಾರಿ ವರ್ಷಧಾರೆಯಾಗುವ ನಿರೀಕ್ಷೆಯಿದ್ದು ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಪತ್ತು ನಿರ್ವಹಣಾ ದಳವನ್ನು ಅಲರ್ಟ್​ನಲ್ಲಿಡಲಾಗಿದೆ. ಇದಲ್ಲದೆ ಸೇನೆ ಹಾಗೂ ನೌಕಾದಳವೂ ಸಿದ್ಧರಿರಬೇಕೆಂದು ಸೂಚಿಸಿದೆ.

ಜೂನ್​ 13ರ ಮುಂಜಾನೆ ಗುಜರಾತ್ ಪ್ರವೇಶಿಸುವ ವಾಯು ಚಂಡಮಾರುತ 135 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ABOUT THE AUTHOR

...view details