ಶ್ರೀನಗರ: ಕರ್ತವ್ಯದ ವೇಳೆ ಇಲ್ಲೊಬ್ಬ ಸೇನಾನಿ ಮಾನವೀಯತೆ ಮೆರೆದು ಗಮನ ಸೆಳೆದಿದ್ದಾರೆ. ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆ ನಿಯಂತ್ರಣದ ಹೊಣೆ ಹೊತ್ತ ಯೋಧ ಊಟದ ವಿರಾಮ ಸಂದರ್ಭದಲ್ಲಿ ದಿವ್ಯಾಂಗ ಮಗುವಿಗೆ ತನ್ನ ಲಂಚ್ ಬಾಕ್ಸ್ ತೆರೆದು ಕೈ ತುತ್ತು ಕೊಟ್ಟರು.
ದಿವ್ಯಾಂಗ ಮಗುವಿಗೆ ಕೈತುತ್ತು ನೀಡಿದ ಯೋಧ, ಕರ್ತವ್ಯದ ಜೊತೆ ಮಾನವೀಯತೆ
ಯೋಧರೆಂದರೆ ಮೆಷಿನ್ ಗನ್ನುಗಳನ್ನು ಹಿಡಿದುಕೊಂಡು ದೇಶ ಕಾಯುವವರೇನೋ ನಿಜ. ಆದ್ರೆ, ಅನೇಕ ಬಾರಿ ಈ ಯೋಧರು ಮಾನವೀಯತೆಯ ಸಾಕಾರಮೂರ್ತಿಗಳು ಕೂಡ. ಇದಕ್ಕೊಂದು ಸೂಕ್ತವಾದ ನಿದರ್ಶನ ಇಲ್ಲಿದೆ ನೋಡಿ.
ಕರ್ತವ್ಯದ ಜೊತೆ ಮಾನವೀಯತೆ
ಸಿಆರ್‌ಪಿಎಫ್ ಹವಾಲ್ದಾರ್ ಇಕ್ಬಾಲ್ ಸಿಂಗ್ ಶ್ರೀನಗರದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. ಮಧ್ಯಾಹ್ನ ವಿಕಲಚೇತನ ಮಗು ಕುಳಿತಿರುವುದನ್ನು ಗಮನಿಸಿದ ಅವರು ಮಗುವಿನ ಬಳಿ ಹೋಗಿ ತನ್ನ ಬುತ್ತಿ ತೆರೆದು ಊಟ ನೀಡಿದರು. ಯೋಧ ನೀಡಿದ ಊಟವನ್ನು ಮಗು ಖುಷಿಯಿಂದ ತಿನ್ನುತ್ತಿರುವುದು ದೃಶ್ಯದಲ್ಲಿದೆ.