ಕರ್ನಾಟಕ

karnataka

ETV Bharat / briefs

ಪಾಕಿಸ್ತಾನಕ್ಕೆ ಹೀನಾಯ ಸೋಲು... ಟ್ರೋಲ್​ ಮಾಡಿದ ಪಾಕ್​ ಅಭಿಮಾನಿಗಳು! - worldcup

ವಿಂಡೀಸ್​ ವಿರುದ್ಧ ಹೀನಾಯ ಪ್ರದರ್ಶನ ತೋರಿದ ಪಾಕಿಸ್ತಾನ ತಂಡವನ್ನು ಪಾಕಿಸ್ತಾನ ತಂಡದ ಅಭಿಮಾನಿಗಳೇ ಟ್ರೋಲ್​ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ

By

Published : Jun 1, 2019, 8:13 AM IST

ಲಾಹೋರ್​: ಟ್ರೆಂಟ್​ಬ್ರಿಡ್ಜ್​ನಲ್ಲಿ​ ವಿಂಡೀಸ್​ ವಿರುದ್ಧ ತನ್ನ ಮೊದಲ ವಿಶ್ವಕಪ್​ ಪಂದ್ಯವನ್ನು ಹಾಗೂ ಸೋತ ಪಾಕಿಸ್ತಾನವನ್ನು ಪಾಕಿಸ್ತಾನಿಯರೇ ಟ್ರೋಲ್ ಮಾಡಿದ ಘಟನೆ ನಡೆದಿದೆ.​

ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ ಕೇವಲ 105 ರನ್​ಗಳಿಗೆ ಆಲೌಟ್​ ಆಗಿತ್ತು. ಈ ಟಾರ್ಗೆಟ್ ​ಅನ್ನು ವೆಸ್ಟ್​ ಇಂಡೀಸ್​ ಕೇವಲ 13.4 ಓವರ್​ಗಳಲ್ಲಿ ಗುರಿ ತಲುಪಿತು.

ಈ ಪಂದ್ಯದ ನಂತರ ಪೆವಿಲಿಯನ್​ನತ್ತ ತೆರಳುತ್ತಿದ್ದ ಪಾಕಿಸ್ತಾನ ಆಟಗಾರರ ವಿರುದ್ಧ ಪಾಕಿಸ್ತಾನ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಚಾಂಪಿಯನ್​ ಟ್ರೋಫಿಗೆದ್ದ ತಂಡವಾಗಿದ್ದು, ಈ ರೀತಿ ಹೀನಾಯ ಪ್ರದರ್ಶನ ತೋರುವುದಕ್ಕೆ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕೂಗಾಡಿದ್ದಾರೆ.

ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಕೂಡ ಸೋಲನುಭವಿಸಿತ್ತು. ಇದಲ್ಲದೆ ಕಳೆದ 14 ಪಂದ್ಯಗಳಲ್ಲಿ ಸತತ ಸೋಲನುಭವಿಸಿರುವ ಪಾಕಿಸ್ತಾನ ತಂಡದ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣದಲ್ಲೂ ಟ್ರೋಲ್​ಗಳ ಸುರಿಮಳೆಯಾಗುತ್ತಿದೆ.

ABOUT THE AUTHOR

...view details