ಬೆಳಗಾವಿ: ಕ್ರೂರಿ ಕೊರೊನಾದಿಂದ ನೂರಾರು ಕುಟುಂಬಗಳು ನಲುಗಿ ಹೋಗ್ತಿದ್ದು, ಸವದತ್ತಿಯಲ್ಲಿ ಒಂದೇ ಕುಟುಂಬದ ಮೂವರು ಸಹೋದರರು ಕೋವಿಡ್‌ಗೆ ಪ್ರಾಣ ತೆತ್ತಿದ್ದಾರೆ.
ಸವದತ್ತಿಯಲ್ಲಿ 15 ದಿನಗಳ ಅಂತರದಲ್ಲಿ ಮೂವರು ಸಹೋದರರು ಕೋವಿಡ್‌ಗೆ ಬಲಿ - ಬೆಳಗಾವಿ ಸವದತ್ತಿ ತಾಲೂಕು ಸುದ್ದಿ
ಕೋವಿಡ್-19 ಮಹಾಮಾರಿಗೆ ಸವದತ್ತಿ ತಾಲೂಕಿನ ಇನಾಮಹೊಂಗಲ ಗ್ರಾಮದ ಮೂವರು ಸಹೋದರರು ಕೇವಲ 15 ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ.
brothers died in belagavi
ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮಹೊಂಗಲ ಗ್ರಾಮದಲ್ಲಿ ಕೊರೊನಾಗೆ 15 ದಿನದ ಅಂತರದಲ್ಲಿ ಮೂವರು ಕೂಡಾ ಸಾವನ್ನಪ್ಪಿದ್ದಾರೆ.
ಗಂಗಾರಾಮ ಬಗಲೆ(52), ದುರ್ಗಾಣಿ ಬಗಲೆ(48) ಹಾಗೂ ಶಿವಾಜಿ ಬಗಲೆ(45) ಮೃತ ಸಹೋದರರು. ಮೃತರು ಮೂಲತಃ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದವರಾಗಿದ್ದು, ಹಲವು ವರ್ಷಗಳಿಂದ ಇನಾಮಹೊಂಗಲ ಗ್ರಾಮದಲ್ಲಿ ಬಂದು ನೆಲೆಸಿದ್ದರು. ಆದ್ರೆ ಹದಿನೈದೇ ದಿನಗಳ ಅಂತರದಲ್ಲಿ ಕುಟುಂಬಕ್ಕೆ ಆಸರೆಯಾಗಿದ್ದ ಮೂವರು ಕೋವಿಡ್‌ಗೆ ಬಲಿಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
Last Updated : May 27, 2021, 5:55 PM IST