ಚೆನ್ನೈ: ರಾಜಸ್ಥಾನ ರಾಯಲ್ಸ್ ವಿರುದ್ಧ 8 ರನ್ಗಳ ರೋಚಕ ಜಯ ಸಾಧಿಸಿದ ಸಿಎಸ್ಕೆ ಆ ಗೆಲುವನ್ನು ಕೋಚ್ ಬರ್ತಡೇಗೆ ಉಡುಗೊರೆಯಾಗಿ ನೀಡಿ ಸಂಭ್ರಮಿಸಿದೆ.
ರಾಯಲ್ಸ್ಗೆ 12 ರನ್ ಅಗತ್ಯವಿದ್ದ ಕೊನೆಯ ಓವರ್ನಲ್ಲಿ ಬ್ರಾವೋ ಕೇವಲ 4 ರನ್ ನೀಡಿ 2 ವಿಕೆಟ್ ಪಡೆದು ಸಿಎಸ್ಕೆಗೆ ಗೆಲುವು ತಂದುಕೊಟ್ಟಿದ್ದರು. ನಿನ್ನೆ ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಬರ್ತಡೇ ಆಗಿದ್ದರಿಂದ ಈ ಗೆಲುವನ್ನೇ ಉಡುಗೊರೆಯಾಗಿ ನೀಡಿದ್ದಲ್ಲದೆ, ಡ್ರೆಸ್ಸಿಂಗ್ ರೂಮ್ನಲ್ಲಿ ಕೋಚ್ ಜನುಮ ದಿನವನ್ನು ಆಟಗಾರರು ಹಾಗೂ ತಂಡದ ಆಡಳಿತ ಮಂಡಳಿ ಅದ್ಧೂರಿಯಾಗಿ ಆಚರಿಸಿದೆ.