ಕರ್ನಾಟಕ

karnataka

ETV Bharat / briefs

ಬಸ್​​​​ನೊಳಗೇ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ : ಯುಪಿಯಲ್ಲಿ ಡಿಫರೆಂಟ್ ಐಡಿಯಾ! - computerised

ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿದ್ಯಾರ್ಥಿಗಳ ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಕಂಪ್ಯೂಟರ್ ಶಿಕ್ಷಣ ನೀಡಲು ವಿಶೇಷ ಬಸ್​​ವೊಂದನ್ನ ರೂಪಿಸಲಾಗಿದ್ದು, ಅದಕ್ಕೆ ಕಪ್ಯೂಟರೈಸ್ಡ್ ಪಾಠಶಾಲಾ ಬಸ್ ಅಂತ ಇದಕ್ಕೆ ಹೆಸರನ್ನಿಡಲಾಗಿದೆ.

yogi adityanath

By

Published : Feb 10, 2019, 7:16 PM IST

ವಾರಣಾಸಿ, (ಉತ್ತರಪ್ರದೇಶ) : ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿದ್ಯಾರ್ಥಿಗಳ ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಕಂಪ್ಯೂಟರ್ ಶಿಕ್ಷಣ ನೀಡಲು ವಿಶೇಷ ಬಸ್​​ವೊಂದನ್ನ ರೂಪಿಸಲಾಗಿದ್ದು, ಅದಕ್ಕೆ ಯೋಗಿ ಆದಿತ್ಯನಾಥ ಚಾಲನೆ ನೀಡಿದ್ದಾರೆ.

ತುಂಬಾ ವಿಭಿನ್ನವಾಗಿ ರೂಪಿಸಲಾಗಿರುವ ಬಸ್​ನಲ್ಲಿ ವಿದ್ಯಾರ್ಥಿಗಳು ಕುಳಿತ ಸರಳವಾಗಿ ಕಂಪ್ಯೂಟರ್ ಕಲಿಯಬಹುದು. ಬಸ್​ನಲ್ಲಿಯೇ ಕುಳಿತುಕೊಳ್ಳೋದಕ್ಕೆ ಹಾಗೂ ತಜ್ಞರು ಕಂಪ್ಯೂಟರ್ ಶಿಕ್ಷಣ ನೀಡೋದಕ್ಕೆ ಅನುಕೂಲವಿದೆ. ಬಸ್​ನಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಸೇರಿ ಮತ್ತಿತರ ವಸ್ತುಗಳನ್ನ ತುಂಬಾ ಅಚ್ಚುಕಟ್ಟಾಗಿ ಫಿಕ್ಸ್ ಮಾಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಎಲ್ಲ ಸೌಲಭ್ಯವನ್ನೂ ಇದರಲ್ಲಿ ಅಳವಡಿಸಲಾಗಿದೆ. ಈ ಹೈಟೆಕ್ ಬಸ್​ನ ವಾರಣಾಸಿಯಲ್ಲಿ ಯೋಗಿ ಉದ್ಘಾಟನೆ ಮಾಡಿದರು.

ಕಂಪ್ಯೂಟರೈಸ್ಡ್ ಪಾಠಶಾಲಾ ಬಸ್ ಅಂತ ಇದಕ್ಕೆ ಹೆಸರನ್ನಿಡಲಾಗಿದೆ. ವಿಶೇಷ ಅಂದ್ರೇ ಇದು ವಿದ್ಯಾರ್ಥಿಗಳು ಇದ್ದಲ್ಲಿಗೆ ತೆರಳಿ, ಕಂಪ್ಯೂಟರ್ ಶಿಕ್ಷಣ ನೀಡಲಿದೆ. ರಾಜ್ಯದಲ್ಲಿರೋ ಪ್ರತಿಯೊಂದೂ ಜಿಲ್ಲೆಗೂ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ನೀಡಲಿದೆ. ಉದ್ಘಾಟನೆ ಬಳಿಕ ಬಸ್​ನಲ್ಲಿ ಅಳವಡಿಸಿದ್ದ ಕಂಪ್ಯೂಟರ್​ಗಳ ಕಾರ್ಯಕ್ಷಮತೆಯನ್ನ ನೋಡಿ ಯೋಗಿ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details