ಮೊಹಾಲಿ: ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ತಮ್ಮ ಪ್ರತಾಪವನ್ನು ಮುಂದುವರಿಸಿದ್ದು, ಐಪಿಎಲ್ನಲ್ಲಿ 300 ಸಿಕ್ಸರ್ ಸಿಡಿಸಿದ ಮೊದಲ ಹಾಗೂ ಏಕೈಕ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಮೊಹಾಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೆಕ್ಲನ್ಘಾನ್ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಐಪಿಎಲ್ ಇತಿಹಾಸದಲ್ಲಿ 300 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎನಿಸಿದರು. ಇದಕ್ಕು ಮೊದಲು ಐಪಿಎಲ್ನಲ್ಲಿ ಗೇಲ್ 100 ಹಾಗೂ 200 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎನಿಸಿದ್ದರು.
ಕ್ರಿಸ್ ಗೇಲ್ ತಮ್ಮ 37 ಇನ್ನಿಂಗ್ಸ್ನಲ್ಲಿ 100, 69 ನೇ ಇನ್ನಿಂಗ್ಸ್ನಲ್ಲಿ 200 ಹಾಗೂ ಇಂದು ತಮ್ಮ 114 ನೇ ಇನ್ನಿಂಗ್ಸ್ನಲ್ಲಿ 300ನೇ ಸಿಕ್ಸರ್ ಸಿಡಿಸಿದ್ದಾರೆ.
ಗೇಲ್ 302 ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವ ಲಿಸ್ಟ್ನಲ್ಲಿ ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿರುವ ಎಬಿ ಡಿ ವಿಲಿಯರ್ಸ್ 192 ಸಿಕ್ಸರ್ ಸಿಡಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಎಂ.ಎಸ್.ಧೋನಿ ಇದ್ದು 187 ಸಿಕ್ಸರ್ ಸಿಡಿಸಿದ್ದಾರೆ. ಸುರೇಶ್ ರೈನಾ 186, ರೋಹಿತ್ ಶರ್ಮಾ 185 ಸಿಕ್ಸರ್ ಸಿಡಿಸಿದ್ದಾರೆ.