ಬೀಜಿಂಗ್: ಯುವತಿಯೋರ್ವಳು ಜೀವಂತ ಆಕ್ಟೋಪಸ್ ತಿನ್ನಲು ಮುಂದಾಗಿ ಅದರಿಂದ ಸರಿಯಾಗಿ ಹೊಡೆತಕ್ಕೊಳಗಾಗಿ ವಿಲವಿಲ ಒಂದಾಡಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಜೀವಂತ ಆಕ್ಟೋಪಸ್ ತಿನ್ನಲು ಮುಂದಾದ ಯುವತಿ... ಸರಿಯಾದ ಪಾಠ ಕಲಿಸಿದ ಜಲಜೀವಿ! - ಜೀವಂತ ಅಕ್ಟೋಪಸ್
ಚೀನಾದ ಬ್ಲಾಗರ್ ಆಗಿರುವ ಈ ಯುವತಿ ಜೀವಂತ ಅಕ್ಟೋಪಸ್ ತಿನ್ನಲು ಮುಂದಾಗಿದ್ದಾಳೆ. ಈ ವೇಳೆ ಅದು ಆಕೆಯ ಕೆನ್ನೆಗೆ ಅಂಟಿಕೊಂಡು ಕಚ್ಚಲು ಆರಂಭಿಸಿದೆ.
ಚೀನಾದ ಬ್ಲಾಗರ್ ಆಗಿರುವ ಈ ಯುವತಿ ಜೀವಂತ ಆಕ್ಟೋಪಸ್ ತಿನ್ನಲು ಮುಂದಾಗಿದ್ದಾಳೆ. ಈ ವೇಳೆ ಅದು ಆಕೆಯ ಕೆನ್ನೆಗೆ ಅಂಟಿಕೊಂಡು ಕಚ್ಚಲು ಆರಂಭಿಸಿದೆ. ಇದರಿಂದ ಬಿಡಿಸಿಕೊಳ್ಳಲು ಆಗದೇ ಯುವತಿ ಒದ್ದಾಡಿದ್ದಾಳೆ. ಕಣ್ಣೀರು ಕೂಡ ಹಾಕಿದ್ದಾಳೆ. ಕೆಲ ನಿಮಿಷಗಳ ಕಾಲ ಮುಖಕ್ಕೆ ಕಚ್ಚಿಕೊಂಡಿದ್ದ ಆಕ್ಟೋಪಸ್ ಬಿಡಿಸಿಕೊಳ್ಳಲು ಮುಂದಾಗಿ, ಕೊನೆಗೂ ಅದನ್ನ ಹೊರತೆಗೆದಿದ್ದಾಳೆ. ಆದರೆ ಅದರ ಹೊಡೆತಕ್ಕೆ ಆಕೆಯ ಕೆನ್ನೆಯ ಕೆಲವಡೆ ರಕ್ತ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಲಾಗ್ಗರ್ ಆಗಿರುವ ಈ ಮಹಿಳೆ ಈ ಹಿಂದೆ ಕೂಡ ಇಂತಹ ಸಾಹಸಗಳಿಗೆ ಮುಂದಾಗಿದ್ದಳು ಎಂದು ತಿಳಿದು ಬಂದಿದೆ.
ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಮೂಕ ಪ್ರಾಣಿ ತಿನ್ನಲು ಮುಂದಾದ ಮಹಿಳೆಗೆ ಅದು ಸರಿಯಾದ ಪಾಠ ಕಲಿಸಿದೆ.