ವಿಶಾಖಪಟ್ಟಣಂ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನ 2ನೇ ಕ್ವಾಲಿಫೈಯರ್ ಪಂದ್ಯ ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ನಡೆಯಲಿದ್ದು, ಬಹಳಷ್ಟು ಕುತೂಹಲ ಮೂಡಿಸಿದೆ.
ವಿಶಾಖಪಟ್ಟಣಂನ ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದು ಚೊಚ್ಚಲ ಸಲ ಫೈನಲ್ಗೆ ಲಗ್ಗೆಯಿಡುವ ಕನಸು ಕಾಣುತ್ತಿದೆ. ಈಗಾಗಲೇ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೆಲುವು ದಾಖಲು ಮಾಡಿರುವ ಡೆಲ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲು ಮುಂದಾಗಿದ್ದರೆ, ಮೊದಲ ಕ್ವಾಲಿಫೈಯರ್ನಲ್ಲಿ ಮುಂಬೈ ವಿರುದ್ಧ ಸೋತಿರುವ ಚೆನ್ನೈ ಹೊಸ ಯೋಜನೆಗಳೊಂದಿಗೆ ಮೈದಾನಕ್ಕಿಳಿಯಲಿದೆ.
ಎರಡು ತಂಡಗಳಿಗೂ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿರುವ ಕಾರಣ, ಕ್ರೀಡಾಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮನೆ ಮಾಡಿದೆ. ಚೆನ್ನೈ ತಂಡದಲ್ಲಿ ಅನುಭವಿ ಆಟಗಾರರಿದ್ದರೆ, ಡೆಲ್ಲಿ ಉದಯೋನ್ಮುಖ ಆಟಗಾರರ ಬಳಗ ಹೊಂದಿದೆ.
ಧೋನಿ ನೇತೃತ್ವದ ಸಿಎಸ್ಕೆ ತಂಡದಲ್ಲಿ ಸುರೇಶ್ ರೈನಾ,ಡುಪ್ಲೆಸಿಸ್,ಮುರುಳಿ ವಿಜಯ್,ಜಡೇಜಾರಂತಹ ಪ್ಲೇಯರ್ಸ್ಗಳಿದ್ದರೆ, ಡೆಲ್ಲಿಯಲ್ಲಿ ಶಿಖರ್ ಧವನ್,ರಿಷಭ್ ಪಂತ್,ಶ್ರೇಯಸ್ ಅಯ್ಯರ್,ಪೃಥ್ವಿ ಶಾರಂತಹ ಆಟಗಾರರನ್ನ ಹೊಂದಿದೆ. ಉಭಯ ತಂಡಗಳು ಈಗಾಗಲೇ 20 ಸಲ ಮುಖಾಮುಖಿಯಾಗಿದ್ದು, ಚೆನ್ನೈ 14 ಸಲ ಗೆಲುವು ದಾಖಲು ಮಾಡಿದರೆ, ಡೆಲ್ಲಿ ಕೇವಲ 6 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.
ಸಂಭಾವ್ಯ ತಂಡ:
ಚೆನ್ನೈ ಸೂಪರ್ ಕಿಂಗ್ಸ್: ಶೇನ್ ವಾಟ್ಸನ್, ಫಾಫ್ ಡುಪ್ಲೆಸಿಸ್, ಸುರೇಶ್ ರೈನಾ, ಮುರುಳಿ ವಿಜಯ್, ಅಂಬಟಿ ರಾಯುಡು, ಎಂ.ಎಸ್ ಧೋನಿ(ಕ್ಯಾಪ್ಟನ್), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ದೀಪಕ್ ಚಹರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ರಿಷಭ್ ಪಂತ್, ಕಾಲಿನ್ ಮನ್ರೋ, ಶೆರ್ಫಾನೆ ರುದರ್’ಫೋರ್ಡ್, ಅಕ್ಷರ್ ಪಟೇಲ್, ಕೀಮೋ ಪೌಲ್, ಟ್ರೆಂಟ್ ಬೌಲ್ಟ್, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ.