ಕರ್ನಾಟಕ

karnataka

ETV Bharat / briefs

ಈ ಹಣಕಾಸು ವರ್ಷದಲ್ಲೂ ಬಿಎಸ್​ಎಲ್​​ಎಲ್​​ಗೆ ಇಷ್ಟೊಂದು ನಷ್ಟ..!

ಪ್ರತಿಸ್ಪರ್ಧಿ ನೆಟ್​ವರ್ಕ್​ಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಬಿಎಸ್​ಎನ್​ಎಲ್​​ ರ್ಚ್​ 2018ರ ಹಣಕಾಸು ವರ್ಷದಲ್ಲಿ ಬಿಎಸ್​ಎನ್​ಎಲ್​​ 8,000 ಕೋಟಿ ನಷ್ಟ ಹೊಂದಿತ್ತು.

ಬಿಎಸ್​ಎಲ್​​ಎಲ್​​

By

Published : Apr 10, 2019, 7:39 AM IST

ನವದೆಹಲಿ:ನೌಕರರಿಗೆ ಇದೇ ಮೊದಲ ಬಾರಿಗೆ ಸಂಬಳ ನೀಡದೆ ಸುದ್ದಿಯಾಗಿದ್ದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ನೆಟ್​ವರ್ಕ್​ ಬಿಎಸ್​ಎನ್​ಎಲ್​​ ಮೊದಲ ಹಣಕಾಸು ವರ್ಷದಲ್ಲಿ ಭಾರಿ ನಷ್ಟ ಅನುಭವಿಸಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ.

ಮಾರ್ಚ್​ 2019ರ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಬಿಎಸ್​ಎನ್​ಎಲ್​​ 7,500 ಕೋಟಿ ನಷ್ಟ ಅನುಭವಿಸಲಿದೆ ಎನ್ನಲಾಗಿದೆ. ಮಾರ್ಚ್​ 2018ರ ಹಣಕಾಸು ವರ್ಷದಲ್ಲಿ ಬಿಎಸ್​ಎನ್​ಎಲ್​​ 8,000 ಕೋಟಿ ನಷ್ಟ ಹೊಂದಿತ್ತು.

ಇವೆಲ್ಲದರ ಮಧ್ಯೆ ಕಂಪೆನಿ ಇದೇ ಮೊದಲ ಬಾರಿಗೆ ಉದ್ಯಮ ವ್ಯವಹಾರದಲ್ಲಿ ಶೇ.50ರಷ್ಟು ಹೆಚ್ಚಳ ಹೊಂದಿದೆ. ಬಿಎಸ್​ಎಸ್​ಎಲ್​ ಮಾರ್ಕೆಟ್​ ಷೇರುಗಳು ಮಾರ್ಚ್​ 2018ರಿಂದ ಜನವರಿ 2019ರ ಅವಧಿಯಲ್ಲಿ ಶೇ.9.44ರಿಂದ ಶೇ.9.76ಕ್ಕೆ ಹೆಚ್ಚಳವಾಗಿದೆ.

ಪ್ರತಿಸ್ಪರ್ಧಿ ನೆಟ್​ವರ್ಕ್​ಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಬಿಎಸ್​ಎನ್​ಎಲ್​​ ಕಳೆದ ಕೆಲ ವರ್ಷಗಳಿಂದ ಹಣಕಾಸು ವಿಚಾರದಲ್ಲಿ ಹಿನ್ನಡೆ ಅನುಭವಿಸಿದೆ.

ABOUT THE AUTHOR

...view details