ಕರ್ನಾಟಕ

karnataka

ETV Bharat / briefs

ಬಿಜೆಪಿ ನೇತೃತ್ವದ ಎನ್​ಡಿಎಗೆ ಅತಿದೊಡ್ಡ ಬಹುಮತ: 2ನೇ ಅವಧಿಗೂ ಪ್ರಧಾನಿಯಾಗುವೆ: ನಮೋ ವಿಶ್ವಾಸ - ಪ್ರಧಾನಿ ಮೋದಿ

ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಮೋ, 2014ರ ಮೇ 26ರಂದು ನಾನು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗಲೇ 2ನೇ ಅವಧಿಗೂ ಪ್ರಧಾನಿಯಾಗುವೆ ಎಂಬ ವಿಶ್ವಾಸವಿತ್ತು. ಈ ಸಲವೂ ನಮ್ಮ ಪಕ್ಷ ಸರ್ಕಾರ ರಚನೆ ಮಾಡಲಿದೆ ಎಂದಿದ್ದಾರೆ.

ನರೇಂದ್ರ ಮೋದಿ

By

Published : May 10, 2019, 4:58 AM IST

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಅತಿ ಹೆಚ್ಚು ಬಹುಮತ ಪಡೆದುಕೊಳ್ಳಲಿದ್ದು, ಎರಡನೇ ಅವಧಿಗೂ ಪ್ರಧಾನಿಯಾಗುವೆ ಎಂದು ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಮೋ, 2014ರ ಮೇ 26ರಂದು ನಾನು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗಲೇ 2ನೇ ಅವಧಿಗೂ ಪ್ರಧಾನಿಯಾಗುವೆ ಎಂಬ ವಿಶ್ವಾಸವಿತ್ತು. ಈ ಸಲವೂ ನಮ್ಮ ಪಕ್ಷ ಸರ್ಕಾರ ರಚನೆ ಮಾಡಲಿದೆ ಎಂದಿದ್ದಾರೆ.

272 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ದಾಖಲು ಮಾಡಲಿದ್ದು, ಜನರು ಮೇಲೆ ನನಗೆ ಹೆಚ್ಚಿನ ನಂಬಿಕೆಯಿದೆ ಎಂದಿದ್ದಾರೆ. ದೇಶದ ಜನರಿಗೆ ಬಲಿಷ್ಠ ಸರ್ಕಾರದ ಅವಶ್ಯಕತೆ ಇದೆ. ಯಾರು ಉತ್ತಮವಾದ ಆಡಳಿತ ನೀಡಲಿದ್ದಾರೆ ಎಂಬುದು ಅವರಿಗೆ ಗೊತ್ತಿದೆ ಎಂದಿರುವ ಮೋದಿ, ಅಭಿವೃದ್ಧಿಯೇ ನಮ್ಮ ಮೂಲಮಂತ್ರವಾಗಿದೆ ಎಂದು ತಿಳಿಸಿದ್ದಾರೆ.

2022ರ ವೇಳೆಗೆ ಭಾರತಕ್ಕೆ ಸ್ವತಂತ್ರ ಸಿಕ್ಕು 75 ವರ್ಷಗಳು ತುಂಬಲಿವೆ. ಅಭಿವೃದ್ಧಿಯತ್ತ ಸಾಗುತ್ತಿರುವ ನಮಗೆ ವಿಶೇಷ ಗೌರವದ ಸಂಕೇತ ಇದಾಗಲಿದೆ ಎಂದಿದ್ದಾರೆ.

ABOUT THE AUTHOR

...view details