ನವದೆಹಲಿ :ಮೇ.23ರಂದು17ನೇ ಲೋಕಸಭಾ ಚುನಾವಣೆಯ ಫಲಿತಾಂಶಹೊರಬಿಳಲಿದೆ. ಇದರ ಮಧ್ಯೆ ನಿನ್ನೆ ಬಹಿರಂಗಗೊಂಡ ಚುನಾವಣೋತ್ತರ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ನಿಶ್ಚಳ ಬಹುಮತ ಸಿಕ್ಕಿದೆ.
ಮೋದಿ ಸರ್ಕಾರ್ 2.0.. ಮೇ 23ರಂದು ಸಂಭ್ರಮಾಚರಣೆಗೆ ಬಿಜೆಪಿ ತಯಾರಿ! - ಪ್ರಧಾನಿ ಮೋದಿ
ಚುನಾವಣೋತ್ತರ ಸಮೀಕ್ಷೆಗಳು ಈಗಾಗಲೇ ಎನ್ಡಿಎ ಪರ ಬಂದಿರುವುದರಿಂದ ಸಂಭ್ರಮಾಚರಣೆ ಮಾಡಲು ಬಿಜೆಪಿ ತಯಾರಿ ನಡೆಸಿದೆ.
300ಕ್ಕೂ ಹೆಚ್ಚು ಸ್ಥಾನ ಪಡೆದು ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವ ವಿಶ್ವಾಸ ಹೊಂದಿದೆ ಬಿಜೆಪಿ. ಈ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅದ್ಧೂರಿ ಸಂಭ್ರಮಾಚರಣೆಗೆ ತಯಾರಿ ನಡೆದಿದೆ. ಮೋದಿ ಸರ್ಕಾರ್ 2.0 ಎಂಬ ಘೋಷವಾಕ್ಯದೊಂದಿಗೆ ಭಾರತೀಯ ಜನತಾ ಪಾರ್ಟಿ ಸಂಭ್ರಮಾಚರಣೆ ಮಾಡುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ.ಈ ಹಿಂದೆ ಇಂದಿರಾ ಗಾಂಧಿ ಹಾಗೂ ಜವಾಹರ್ಲಾಲ್ ನೆಹರೂ ಸ್ವಂತ ಬಲದ ಮೇಲೆ ಇಷ್ಟೊಂದು ಕ್ಷೇತ್ರದಲ್ಲಿ ಗೆಲುವು ದಾಖಲು ಮಾಡಿ ಅಧಿಕಾರ ಪಡೆದುಕೊಂಡಿದ್ದರು. ಬಿಜೆಪಿಯ ಪದಾಧಿಕಾರಿಗಳು ಈಗಾಗಲೇ ಸಂಭ್ರಮಾಚರಣೆಗೆ ಬೇಕಾದ ಎಲ್ಲ ರೀತಿಯ ಪ್ಲಾನ್ ಹಾಕಿಕೊಂಡಿದ್ದಾರೆ. ಫಲಿತಾಂಶ ಬಹಿರಂಗಗೊಳ್ಳುತ್ತಿದ್ದಂತೆ ಸಂಭ್ರಮ ಮುಗಿಲುಮುಟ್ಟಲಿದೆ.
ಪಕ್ಷದ ಗೆಲುವು ಖಚಿತಗೊಳ್ಳುತ್ತಿದ್ದಂತೆ ವಿವಿಧ ಮಾಧ್ಯಮಗಳಿಗೆ ರಿಯಾಕ್ಷನ್ ನೀಡಲು ಬರೋಬ್ಬರಿ 30 ಕ್ಯಾಬಿನ್ ಕೂಡ ಸಿದ್ಧಗೊಳಿಸಿರುವುದಾಗಿ ತಿಳಿದು ಬಂದಿದೆ.