ಕರ್ನಾಟಕ

karnataka

ETV Bharat / briefs

ಖರ್ಗೆ ಅವರನ್ನು ಸಿಎಂ ಮಾಡಿ: ಟ್ವೀಟರ್​ನಲ್ಲಿ ಸಿದ್ದುಗೆ ಸವಾಲೆಸೆದ ಬಿಜೆಪಿ - bangalore

ರಾಜಕೀಯ ನಾಯಕರ ಟ್ವೀಟರ್​ ವಾರ್​ ಮುಂದುವರೆದಿದೆ. ದಲಿತರ ಮೇಲೆ ಕಾಳಜಿ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಸಿದ್ದರಾಮಯ್ಯಗೆ ಟ್ವೀಟರ್​ನಲ್ಲಿ ಬಿಜೆಪಿ ಸವಾಲೆಸೆದಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

By

Published : Jun 5, 2019, 1:52 PM IST

ಬೆಂಗಳೂರು: ಟ್ವೀಟರ್ ರಾಮಯ್ಯನವರೇ ನಿಮಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ತೋರಿಸಿ ಎಂದು ಬಿಜೆಪಿ ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಮಾನ್ಯ ಟ್ವೀಟರ್‌ ರಾಮಯ್ಯನವರೇ ದಲಿತರ ಮೇಲಿರುವ ನಿಮ್ಮ ಪ್ರೀತಿಯನ್ನು ಕೇವಲ ಟ್ವೀಟರ್ ಮೂಲಕ ತೋರಿಸಬೇಡಿ. ಡಾ.ಜಿ.ಪರಮೇಶ್ವರ್ ಅವರು ದಲಿತರು ಎಂಬ ಕಾರಣಕ್ಕೆ ಸಿಎಂ ಸ್ಥಾನ ತಪ್ಪಿಸಿದ್ದು ತಾವೇ ಎಂದು ರಾಜ್ಯದ ಜನತೆಗೆ ಗೊತ್ತಿದೆ ಹೀಗೆಂದು ರಾಜ್ಯ ಬಿಜೆಪಿ ಅಧಿಕೃತ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಅವರ ಟ್ವೀಟ್ ಚಾಳಿಯನ್ನು ಟೀಕಿಸಿದೆ.

ದಲಿತರ ಮೇಲೆ ತಮಗೆ ನಿಜಕ್ಕೂ ಕಾಳಜಿ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ನಿಮ್ಮ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಟ್ವೀಟ್ ಮೂಲಕ ಸವಾಲೆಸೆದಿದೆ.

ABOUT THE AUTHOR

...view details