ಬೆಂಗಳೂರು:ಭಾರತದ ಪುರಾತನ ಹಾಗೂ ಸದ್ಯ ಬಳಕೆಯಿಂದ ಬಹುತೇಕ ಮಾಯವಾಗಿರುವ ಸಂಸ್ಕೃತ ಭಾಷೆಯನ್ನು ಸಿಲಿಕಾನ್ ಸಿಟಿಯ ಕ್ಯಾಬ್ ಡ್ರೈವರ್ ನಿರರ್ಗಳವಾಗಿ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
45 ಸೆಕೆಂಡಿನ ವಿಡಿಯೋದಲ್ಲಿ ಪ್ರಯಾಣಿಕ ಸಂಸ್ಕೃತದಲ್ಲಿ ಕೇಳುವ ಎಲ್ಲ ಪ್ರಶ್ನೆಗೆ ಕ್ಯಾಬ್ ಚಾಲಕ ಯಾವುದೇ ತಪ್ಪಿಲ್ಲದೆ ಸ್ಪಷ್ಟವಾಗಿ ಉತ್ತರಿಸುತ್ತಾನೆ. ಪ್ರಯಾಣಿಕ ಹಾಗೂ ಚಾಲಕನ ಈ ಚುಟುಕು ಸಂಭಾಷಣೆ ಸದ್ಯ ಟ್ವಿಟರ್ನಲ್ಲಿ ವೈರಲ್ ಆಗಿದೆ.