ಬೆಂಗಳೂರು:ಸ್ಕಿಮ್ಮರ್ ಮೆಶಿನ್ ಬಳಸಿ ಇಬ್ಬರು ಖದೀಮರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಅಕೌಂಟ್ ಹ್ಯಾಕ್ ಮಾಡಿ 37 ಸಾವಿರ ರೂ.ಹಣ ದೋಚಿರುವ ಪ್ರಕರಣ ನಡೆದಿದೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಚಂದ್ರಶೇಖರ್ ತಲ್ವಾರ್ ಹಣ ಕಳೆದುಕೊಂಡ ಕಾನ್‌ಸ್ಟೇಬಲ್.

ಚಂದ್ರಶೇಖರ್ ಅವರ ಖಾತೆಯಿಂದ ಇದೇ ತಿಂಗಳು 3ರಂದು ಲ್ಯಾವೆಲ್ಲಿ ರಸ್ತೆಯ ಕೆನರಾ ಬ್ಯಾಂಕ್ ಎಟಿಎಂನಿಂದ 5 ಸಾವಿರ ರೂ ಕಳ್ಳತನವಾಗಿತ್ತು. ಇದಾದ ಬಳಿಕ ಜೂನ್ 6 ರಂದು ಚಂದ್ರಶೇಖರ್ ಮೊಬೈಲ್‌ಗೆ 37 ಸಾವಿರ ಹಣ ಡ್ರಾ ಮಾಡಿರುವುದಾಗಿ ಸಂದೇಶ ಬಂದಿದೆ. ಈ ಬಗ್ಗೆ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿರೋದು ಬೆಳಕಿಗೆ ಬಂದಿದೆ. ಎಟಿಎಂನಲ್ಲಿ ಸ್ಕಿಮ್ಮರ್ ಮೆಶಿನ್ ಬಳಸಿ ಹಣ ದೋಚಿರುವ ಆರೋಪಿಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ತನಿಖೆ ಮುಂದುವರೆಸಿದ್ದಾರೆ.