ಕರ್ನಾಟಕ

karnataka

ETV Bharat / briefs

ಅವೇಂಜರ್ಸ್​ ಎಂಡ್​ಗೇಮ್​​ ಅಬ್ಬರಕ್ಕೆ ದಾಖಲೆಗಳು ಧೂಳಿಪಟ... ವಿಶ್ವಾದ್ಯಂತ 8,384 ಕೋಟಿ ಗಳಿಕೆ..! - ಥಿಯೇಟರ್

ಭಾರತದಲ್ಲಿ ರಿಲೀಸ್​ಗೂ ಮುನ್ನ ಚೀನಾ ಹಾಗೂ ಇತರೇ ಕೆಲ ದೇಶಗಳಲ್ಲಿ ಬಿಡುಗಡೆಯಾಗಿ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿತ್ತು.

ಅವೇಂಜರ್ಸ್​

By

Published : Apr 29, 2019, 10:56 AM IST

ಮಾರ್ವೆಲ್ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದ ಸಿನಿಮಾ ಅವೇಂಜರ್ಸ್​: ಎಂಡ್​ಗೇಮ್​ ಥಿಯೇಟರ್​ಗೆ ಅಪ್ಪಳಿಸಿ ಮೂರು ದಿನವಾಗಿದ್ದು, ಕಲೆಕ್ಷನ್ ವಿಚಾರದಲ್ಲಿ ಕಮಾಲ್ ಮಾಡ್ತಿದೆ.

ಭಾರತದಲ್ಲಿ ರಿಲೀಸ್​ಗೂ ಮುನ್ನ ಚೀನಾ ಹಾಗೂ ಇತರೇ ಕೆಲ ದೇಶಗಳಲ್ಲಿ ಬಿಡುಗಡೆಯಾಗಿ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿತ್ತು.

ಇದೀಗ ಭಾರತಲ್ಲಿ ಅವೇಂಜರ್ಸ್​: ಎಂಡ್​ಗೇಮ್​​ಗೆ ಹಿಂದಿ ಸಿನಿಮಾಗಳಿಗೂ ಸಿಗದ ಓಪನಿಂಗ್ ದೊರೆತಿದೆ, ಪರಿಣಾಮ ಮೊದಲ ದಿನ 53.10 ಕೋಟಿ ಹಾಗೂ ಎರಡನೇ ದಿನ 51.40 ಕೋಟಿ ಗಳಿಸಿ ವಾರಾಂತ್ಯದಲ್ಲಿ ನೂರೈವತ್ತರ ಗಡಿ ದಾಟುವ ಸೂಚನೆ ನೀಡಿದೆ.

ವಿಶ್ವಾದ್ಯಂತ ಅವೇಂಜರ್ಸ್​: ಎಂಡ್​ಗೇಮ್​​​ ಸುಮಾರು 8,384 ಕೋಟಿ ಕಲೆಕ್ಷನ್ ಮಾಡಿ ತನ್ನ ಸಾಮರ್ಥ್ಯ ತೋರಿಸಿದೆ.

ಚೀನಾ, ಬ್ರೆಜಿಲ್​, ಫ್ರಾನ್ಸ್​, ಈಜಿಪ್ಟ್, ದಕ್ಷಿಣ ಆಫ್ರಿಕಾ ಸೇರಿದಂತೆ 38 ದೇಶಗಳಲ್ಲಿ ಈ ಚಿತ್ರ ಹೊಸ ದಾಖಲೆಯನ್ನೇ ಬರೆದಿದೆ.

ABOUT THE AUTHOR

...view details