ಕರ್ನಾಟಕ

karnataka

ETV Bharat / briefs

ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾಗೆ ಕಾಂಗ್ರೋಗಳ ಅಂಕುಶ.. ವಿಶ್ವಕಪ್​​ನಲ್ಲಿ ಆಸೀಸ್‌ ಪಡೆ ಅಬ್ಬರಿಸಲು ಸನ್ನದ್ಧ - ಅಭ್ಯಾಸ ಪಂದ್ಯ

ವಿಶ್ವಕಪ್​ಗೂ ಮುನ್ನ ನಡೆದ ಎರಡು ಅಭ್ಯಾಸ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡುವ ಮೂಲಕ ಕಾಂಗರೂ ಪಡೆ ಮತ್ತೊಮ್ಮೆ ಮಹಾಯುದ್ಧದಲ್ಲಿ ತನ್ನ ಪರಾಕ್ರಮ ತೋರಿಸಲು ಮುಂದಾಗಿದೆ.

ಆಸ್ಟ್ರೇಲಿಯಾ ತಂಡ

By

Published : May 28, 2019, 7:48 AM IST

ಲಂಡನ್​ :ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದ ಆಸ್ಟ್ರೇಲಿಯಾ ತಾನು ಆಡಿರುವ 2ನೇ ಅಭ್ಯಾಸ ಪಂದ್ಯದಲ್ಲೂ ಶ್ರೀಲಂಕಾ ವಿರುದ್ಧ ಸುಲಭ ಗೆಲುವು ದಾಖಲು ಮಾಡಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸದ ಶ್ರೀಲಂಕಾ ಲಾಹೀರು ತಿರುಮನ್ನೆ(56) ಹಾಗೂ ಧಂಜನಯ ಸಿಲ್ವಾ(43)ರನ್​ಗಳ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 8ವಿಕೆಟ್​ ಕಳೆದುಕೊಂಡು 239ರನ್​ ಗಳಿಕೆ ಮಾಡಿತು.

ಇದರ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಫಿಂಚ್​(11)ವಿಕೆಟ್​ ಕಳೆದುಕೊಂಡರೂ ಉಸ್ಮಾನ್​ ಖವಾಜಾ(89), ಶಾನ್​ ಮಾರ್ಷ್​​​(34), ಮ್ಯಾಕ್ಸ್​​ವೆಲ್​​(36) ಹಾಗೂ ಸ್ಟೋನಿಸ್​​​(32) ರನ್​ಗಳ ನೆರವಿನಿಂದ 44.5 ಓವರ್​​​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 241ರನ್​​ಗಳಿಗೆ ಮಾಡುವ ಮೂಲಕ ಸುಲಭವಾಗಿ ಗೆಲುವಿನ ನಗೆ ಬೀರಿದೆ.

ಅಭ್ಯಾಸ ಪಂದ್ಯದಲ್ಲಿ ತಾನಾಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿರುವ ಆಸ್ಟ್ರೇಲಿಯಾ ವಿಶ್ವಕಪ್​ ಮಹಾಯುದ್ಧಕ್ಕೆ ಸನ್ನದ್ಧವಾಗಿದೆ. ಜೂನ್​ 1ರಂದು ಆಫ್ಘಾನಿಸ್ತಾನ ವಿರುದ್ಧ ಆಸೀಸ್‌ ಮೊದಲ ಪಂದ್ಯದಲ್ಲಿ ಸೆಣೆಸಲಿದೆ.

ABOUT THE AUTHOR

...view details