ನವದೆಹಲಿ: ಏಳು ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಗೆ ಅಧಿಕೃತ ತೆರೆಬಿದ್ದಿದ್ದು ಚುನಾವಣಾ ಆಯೋಗ ಒಟ್ಟಾರೆ ಶೇಕಡಾವಾರು ಮತದಾನದ ಅಂಕಿ-ಅಂಶ ತೆರೆದಿಟ್ಟಿದೆ.
ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಮತದಾನದ ವಿಚಾರದಲ್ಲಿ ಈ ಹಿಂದಿನ ಎಲ್ಲ ದಾಖಲೆಗಳು ಬ್ರೇಕ್ ಆಗಿವೆ. ಏಳು ಹಂತದಲ್ಲಿ ಒಟ್ಟಾರೆ ಶೇ.67.11ರಷ್ಟು ವೋಟಿಂಗ್ ನಡೆದಿದೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ತಿಳಿಸಿದೆ.
2009ರಲ್ಲಿ ಶೇ.56.90ರಷ್ಟು ವೋಟಿಂಗ್ ನಡೆದಿತ್ತು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಶೇ.66.40ರಷ್ಟು ಮತದಾನ ನಡೆದಿತ್ತು. ಈ ಬಾರಿ ಈ ಪ್ರಮಾಣ ಕೊಂಚ ಏರಿಕೆಯಾಗಿದ್ದು ಆಯೋಗ ತುಸು ನೆಮ್ಮದಿ ನೀಡಿದೆ. ಮತದಾನದ ಪ್ರಮಾಣ ಹೆಚ್ಚಳಕ್ಕೆ ಆಯೋಗ ವಿವಿಧ ರೀತಿಯಲ್ಲಿ ಪ್ರಚಾರ ನಡೆಸಿತ್ತು.