ಕಲಬುರಗಿ: ಗೃಹ ಖಾತೆಗೆ ಕ್ಲೀನ್ ಚಿಟ್ ಖಾತೆ ಎಂದು ಅಮಿತ್ ಶಾ ಬಗ್ಗೆ ಟ್ವೀಟ್ ಮಾಡಿದ್ದು ಸರಿಯಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಈ ರೀತಿಯ ಹಗುರ ಹೇಳಿಕೆ ನೀಡುವುದು ತಪ್ಪು ಎಂದು ಸಂಸದ ಡಾ.ಉಮೇಶ್ ಜಾಧವ್ ತೀಕ್ಷ್ಣವಾಗಿಯೆ ಕುಟುಕಿದ್ದಾರೆ.
ಅಮಿತ್ ಶಾ ಕೆಲಸ ಮಾಡಿ ತೋರಿಸುತ್ತಾರೆ: ಪ್ರಿಯಾಂಕ್ ಖರ್ಗೆಗೆ ಜಾಧವ್ ಟಾಂಗ್ - ಟ್ವೀಟ್
ಕೇಂದ್ರ ಗೃಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಮಿತ್ ಶಾ ಬಗ್ಗೆ ಕ್ಲೀನ್ ಚಿಟ್ ಖಾತೆ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಕ್ಕೆ ಸಂಸದ ಜಾಧವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸಂಸದ ಡಾ.ಉಮೇಶ ಜಾಧವ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ, ಮೋದಿ ಅವರ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ. ಗೃಹ ಖಾತೆ ವಹಿಸಿಕೊಂಡಿರುವ ಅಮಿತ್ ಶಾ ಕೆಲಸ ಮಾಡಿ ತೋರಿಸುತ್ತಾರೆ. ಅವರನ್ನು ಟೀಕಿಸುವುದು, ಆರೋಪಿಸುವುದು ಸಮಂಜಸವಲ್ಲ ಎಂದು ಹೇಳಿದರು.