ಕರ್ನಾಟಕ

karnataka

ETV Bharat / briefs

ಎಎನ್​​​-32 ಮಿಸ್ಸಿಂಗ್‌.. ರಾತ್ರಿಯಿಡೀ ಹುಡುಕಾಟ, ಇಸ್ರೋ ಭಾಗಿ... ವಿಮಾನದ ಸುಳಿವು ಇನ್ನೂ ನಿಗೂಢ!

ಪ್ರಸ್ತುತ ಕಾರ್ಯಾಚರಣೆ ಮುಂದುವರೆದಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಾಯುಸೇನೆಗೆ ಹುಡುಕಾಟದಲ್ಲಿ ಕೈಜೋಡಿಸಿದೆ. ರಡಾರ್ ಫೋಟೋಗಳ ಮೂಲಕ ನಾಪತ್ತೆಯಾದ ವಿಮಾನವನ್ನು ಹುಡುಕುವ ಕಾರ್ಯದಲ್ಲಿ ಇಸ್ರೋ ಭಾಗಿಯಾಗಿದೆ.

ನಾಪತ್ತೆ

By

Published : Jun 4, 2019, 4:50 PM IST

ನವದೆಹಲಿ:ಭಾರತೀಯು ವಾಯಸೇನೆಗೆ ಸೇರಿದ ವಿಮಾನವೊಂದು ನಾಪತ್ತೆಯಾಗಿ ಒಂದು ದಿನ ಕಳೆದರೂ ಸಣ್ಣ ಸುಳಿವೂ ಪತ್ತೆಯಾಗಿಲ್ಲ. ವಾಯುಸೇನೆ ಹಾಗೂ ಭೂಸೇನೆ ಜಂಟಿಯಾಗಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಹೊರತಾಗಿಯೂ ಎಎನ್-32 ವಿಮಾನ ಪತ್ತೆಹಚ್ಚಲಾಗಿಲ್ಲ.

ಸುಖೋಯ್ ಯುದ್ಧವಿಮಾನ ಹಾಗೂ ಎರಡು ಹೆಲಿಕಾಪ್ಟರ್​​ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು. ಹೆಲಿಕಾಪ್ಟರ್​​ಗಳು ನಾಪತ್ತೆಯಾದ ವಿಮಾನದ ಸ್ಥಳವನ್ನು ಗುರುತಿಸಿದೆ ಎಂದು ರಾತ್ರಿ ವೇಳೆ ವಾಯುಸೇನೆ ಹೇಳಿಕೊಂಡಿತ್ತು.

ಟೇಕಾಫ್​ ಆದ ಅರ್ಧ ಗಂಟೆಯಲ್ಲಿ ಐಎಎಫ್ ವಿಮಾನ ನಾಪತ್ತೆ..!

ಸದ್ಯ ಕಾರ್ಯಾಚರಣೆ ಮುಂದುವರೆದಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಾಯುಸೇನೆಗೆ ಹುಡುಕಾಟದಲ್ಲಿ ಕೈಜೋಡಿಸಿದೆ. ರಡಾರ್ ಫೋಟೋಗಳ ಮೂಲಕ ನಾಪತ್ತೆಯಾದ ವಿಮಾನವನ್ನು ಹುಡುಕುವ ಕಾರ್ಯದಲ್ಲಿ ಇಸ್ರೋ ಭಾಗಿಯಾಗಿದೆ.

ಘಟನೆಯ ಹಿನ್ನೆಲೆ :

ಸೋಮವಾರ ಮಧ್ಯಾಹ್ನ 12.25ಕ್ಕೆ ಅಸ್ಸೋಂನ ಜೋರ್ಹತ್​ನಿಂದ ವಾಯುಸೇನೆಯ ಎಎನ್​​-32 ವಿಮಾನ ಟೇಕಾಫ್​ ಆಗಿತ್ತು. ಅರುಣಾಚಲ ಪ್ರದೇಶದ ಮೆಂಚುಕಾದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಟೇಕಾಫ್ ಆದ ಅರ್ಧಗಂಟೆಯಲ್ಲಿ ವಿಮಾನದ ಸಂಪರ್ಕ ಕಡಿತಗೊಂಡಿತ್ತು. ಎಎನ್​​-32 ವಿಮಾನದಲ್ಲಿ ಒಟ್ಟು 13 ಮಂದಿ ಪ್ರಯಾಣ ಮಾಡುತ್ತಿದ್ದರು.

ABOUT THE AUTHOR

...view details