ಕರ್ನಾಟಕ

karnataka

ETV Bharat / briefs

69 ಉಗ್ರರ ಚಂಡಾಡಿದ ಸೇನೆ : 2018 ರಿಂದ ಇಲ್ಲಿವರೆಗೂ 272 ಟೆರರ್​​ ಮಟ್ಯಾಷ್​! - ಶ್ರೀನಗರ

ಪುಲ್ವಾಮ ದಾಳಿ ಆದ ಬಳಿಕವೇ 41 ಉಗ್ರರನ್ನ ಹುಡುಕಿ ಬೇಟೆಯಾಡಿದ್ದೇವೆ. ಇದರಲ್ಲಿ ಜೈಷ್​- ಇ- ಮೊಹಮ್ಮದ್​ನ 25 ಉಗ್ರರ ಬೇಟೆಯಾಡಿದ್ದೇವೆ. ಇದರಲ್ಲಿ 13 ಪಾಕಿಸ್ತಾನಿ ಮೂಲದವರಾಗಿದ್ದಾರೆ ಎಂದು ಧಿಲ್ಲೋನ್​ ಹೇಳಿದ್ದಾರೆ.

ಕೆಜೆಎಸ್​ ಧಿಲ್ಲೋನ್

By

Published : Apr 24, 2019, 5:25 PM IST

ಶ್ರೀನಗರ: ಈ ವರ್ಷ ಜಮ್ಮು ಕಾಶ್ಮೀರದಲ್ಲಿ ಬರೋಬ್ಬರಿ 69 ಉಗ್ರರರನ್ನ ಕೊಂದು ಹಾಕಲಾಗಿದ್ದು, 12 ಉಗ್ರರ ಹೆಡೆಮುರಿಕಟ್ಟಿ ಜೈಲಿಗೆ ಅಟ್ಟಲಾಗಿದೆ ಎಂದು ಜನರಲ್​ ಆಫೀಸರ್ ಕಮಾಂಡಿಂಗ್​ನ ಕೆಜೆಎಸ್​ ಧಿಲ್ಲೋನ್​ ಹೇಳಿದ್ದಾರೆ.

ಪುಲ್ವಾಮ ದಾಳಿ ಆದ ಬಳಿಕವೇ 41 ಉಗ್ರರನ್ನ ಹುಡುಕಿ ಬೇಟೆಯಾಡಿದ್ದೇವೆ. ಇದರಲ್ಲಿ ಜೈಷ್​- ಇ- ಮೊಹಮ್ಮದ್​ನ 25 ಉಗ್ರರ ಬೇಟೆಯಾಡಿದ್ದೇವೆ. ಇದರಲ್ಲಿ 13 ಪಾಕಿಸ್ತಾನಿ ಮೂಲದವರಾಗಿದ್ದಾರೆ ಎಂದು ಧಿಲ್ಲೋನ್​ ಹೇಳಿದ್ದಾರೆ.

ಪುಲ್ವಾಮಾ ದಾಳಿ ಆದ ಬಳಿಕ ನಾವು ಜೈಷ್​ ಇ ಮೊಹಮ್ಮದ್​ ಅವರನ್ನ ಟಾರ್ಗೆಟ್​ ಮಾಡಿದ್ದೇವೆ. ಸೇನಾ ಕಾರ್ಯಾಚರಣೆ ವೇಗ ನೋಡಿ ಜೈಷ್​ ಸಂಘಟನೆ ನೇತೃತ್ವ ವಹಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಧಿಲ್ಲೋನ್ ಮಾಹಿತಿ ಒದಗಿಸಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಜಮ್ಮು ಕಾಶ್ಮೀರದ ಡಿಜಿಪಿ ಮಾತನಾಡಿ, ಸ್ಥಳೀಯರ ನೇಮಕಾತಿ ಮಾಡಿಕೊಳ್ಳುವುದು ಕಡಿಮೆ ಆಗಿದೆ. ಇದು ಆರೋಗ್ಯಕರ ಬೆಳವಣಿಗೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ 2018 ರಿಂದ ಇಲ್ಲಿವರೆಗೂ 272 ಉಗ್ರರನ್ನ ಗುಂಡಿಕ್ಕಿ ಕೊಂದಿದ್ದರೆ, ಬಹಳಷ್ಟು ಸಂಖ್ಯೆಯಲ್ಲಿ ಉಗ್ರರ ಸೆರೆ ಹಿಡಿದು ಜೈಲಿಗೆ ಅಟ್ಟಿದ್ದೇವೆ ಎಂದಿದ್ದಾರೆ.

ABOUT THE AUTHOR

...view details