ಕರ್ನಾಟಕ

karnataka

By

Published : May 12, 2021, 9:56 PM IST

ETV Bharat / briefs

ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೇನಲ್ಲಿ 23 ಸೋಂಕಿತ ಗರ್ಭಿಣಿಯರು ದಾಖಲು!

ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆಯಾಗಿದ್ದರೂ, ಅವರು ಕ್ವಾರಂಟೈನ್​ಗೆ ಒಳಗಾಗುವುದು ಕಡ್ಡಾಯವಾಗಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 24 ಬೆಡ್ ಸಾಮರ್ಥ್ಯದ ಕೋವಿಡ್ ಮೆಟರ್ನಿಟಿ ಬ್ಲಾಕ್ ಮಾಡಲಾಗಿದೆ.

LadyGoschen Hospital
LadyGoschen Hospital

ಮಂಗಳೂರು:ನಗರದ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯಲ್ಲಿ ಮೇ ಮೊದಲ ವಾರದಲ್ಲಿಯೇ 23 ಮಂದಿ ಕೊರೊನಾ ಸೋಂಕಿತ ಗರ್ಭಿಣಿಯರು ಹೆರಿಗೆಗಾಗಿ ದಾಖಲಾಗಿದ್ದಾರೆ.

ಇವರಲ್ಲಿ 17 ಮಂದಿ ಸೋಂಕಿತೆಯರಿಗೆ ಹೆರಿಗೆಯಾಗಿದ್ದು, ತಾಯಿ ಮಕ್ಕಳು ಸೌಖ್ಯವಾಗಿದ್ದಾರೆ‌‌. ಈ 17 ಮಂದಿಯಲ್ಲಿ 9 ಮಂದಿಗೆ ಸಿಸೇರಿಯನ್ ಆಗಿದ್ದು, ನಾಲ್ವರಿಗೆ ಮಾತ್ರ ನಾರ್ಮಲ್ ಹೆರಿಗೆ ಮಾಡಿಸಲಾಗಿದೆ. ಓರ್ವರಿಗೆ ಆ್ಯಂಬುಲೆನ್ಸ್​ನಲ್ಲಿಯೇ ಹೆರಿಗೆಯಾಗಿದ್ದು, ಮೂವರಿಗೆ ಅಬಾರ್ಷನ್ ಆಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಮಾತನಾಡಿ, ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆಯಾಗಿದ್ದರೂ, ಅವರು ಕ್ವಾರಂಟೈನ್​ಗೆ ಒಳಗಾಗುವುದು ಕಡ್ಡಾಯವಾಗಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 24 ಬೆಡ್ ಸಾಮರ್ಥ್ಯದ ಕೋವಿಡ್ ಮೆಟರ್ನಿಟಿ ಬ್ಲಾಕ್ ಮಾಡಲಾಗಿದ್ದು, ಸೋಂಕಿತೆ ಗರ್ಭಿಣಿಯರನ್ನು ಇಲ್ಲೇ ದಾಖಲು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details