ಕರ್ನಾಟಕ

karnataka

By

Published : May 8, 2021, 6:49 PM IST

ETV Bharat / briefs

ದೆಹಲಿ ಸರ್ಕಾರಿ ಆಸ್ಪತ್ರೆಯಿಂದ ಹೇಳದೆ ಕೇಳದೆ 23 ಕೊರೊನಾ ರೋಗಿಗಳು ಪರಾರಿ!

ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲೂ ಇದು ನಡೆಯುತ್ತಿದೆ ಎಂದು ಪ್ರಕಾಶ್ ಹೇಳಿದ್ದಾರೆ. ಅಂತಹ ರೋಗಿಗಳ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಮೇಯರ್ ಹೇಳಿದ್ದಾರೆ..

Hindu Rao Hospital
Hindu Rao Hospital

ನವದೆಹಲಿ :ಸುಮಾರು 23 ಕೊರೊನಾ ರೋಗಿಗಳು ದಾಖಲಾತಿ ಪಡೆದು ಬಳಿಕ ಯಾರಿಗೂ ತಿಳಿಸದೆ ಏ.19 ರಿಂದ ಮೇ 6ರ ನಡುವೆ ಹಿಂದೂ ರಾವ್ ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ ಎಂದು ದೆಹಲಿ ಮೇಯರ್ ಜೈ ಪ್ರಕಾಶ್ ಶನಿವಾರ ತಿಳಿಸಿದ್ದಾರೆ.

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ನಡೆಸುತ್ತಿರುವ ಹಿಂದೂ ರಾವ್ ಆಸ್ಪತ್ರೆ ರಾಷ್ಟ್ರ ರಾಜಧಾನಿಯ ಅತಿದೊಡ್ಡ ನಾಗರಿಕ ಆಸ್ಪತ್ರೆಯಾಗಿದೆ.

ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ 250 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಆದ್ರೆ, ದೆಹಲಿ ಕೊರೊನಾ ಆ್ಯಪ್ ಪ್ರಕಾರ ಪ್ರಸ್ತುತ ಎಲ್ಲಾ ಹಾಸಿಗೆಗಳು ಭರ್ತಿಯಾಗಿತ್ತು.

ಏಪ್ರಿಲ್ 19 ರಿಂದ ಮೇ 6 ಅಂದ್ರೆ ಸುಮಾರು 17 ದಿನಗಳ ನಡುವೆ ಯಾರಿಗೂ ಮಾಹಿತಿ ನೀಡದೆ 23 ರೋಗಿಗಳು ಆಸ್ಪತ್ರೆಯಿಂದ ಹೊರ ನಡೆದ್ದಾರೆ. ರೋಗಿಗಳ ದಾಖಲಾತಿ ಆಗಿದ್ದು, ಅವರೂ ಬೇರೆಡೆ ತೆರಳಿ ಉತ್ತಮ ಸೌಲಭ್ಯಗಳನ್ನು ಪಡೆಯುವುದಾಗಿ ಮಾಹಿತಿ ನೀಡದೆ ಹೊರಟು ಹೋಗುತ್ತಾರೆ.

ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲೂ ಇದು ನಡೆಯುತ್ತಿದೆ ಎಂದು ಪ್ರಕಾಶ್ ಹೇಳಿದ್ದಾರೆ. ಅಂತಹ ರೋಗಿಗಳ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಮೇಯರ್ ಹೇಳಿದ್ದಾರೆ

ABOUT THE AUTHOR

...view details