ಲಂಡನ್: ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ತಂಡ ಎರಡು ಬಣ್ಣದ ಜರ್ಸಿ ತೊಟ್ಟು ಆಡಬೇಕಾದ ಪರಿಸ್ಥಿತಿ ಎದುರಾಗಿದೆ, ಇದಕ್ಕೆ ಭಾರತವೂ ಸಿದ್ದವಾಗಿದೆ ಎಂಬ ವಿಚಾರ ಕೇಳಿಬರುತ್ತಿದೆ.
ವಿಶ್ವಕಪ್ನಲ್ಲಿ ಭಾರತ, ಶ್ರೀಲಂಕಾ,ಇಂಗ್ಲೆಂಡ್ ಹಾಗೂ ಅಫ್ಘಾನಿಸ್ಥಾನ ತಂಡಗಳು ನೀಲಿ ಬಣ್ಣದ ಜರ್ಸಿ ತೊಡುತ್ತಿವೆ. ಇದರಿಂದ ಒಂದೇ ಪಂದ್ಯದಲ್ಲಿ ಈ ತಂಡಗಳು ಎದುರುಬದುರಾದಾಗ ಗೊಂದಲ ಉಂಟಾಗಬಾರದೆಂದು ಪ್ರಸಾರ ಸಂಸ್ಥೆಗಳ ಕೋರಿಕೆಯ ಮೇರೆಗೆ ಐಸಿಸಿ ಎರಡು ಜರ್ಸಿಗಳನ್ನು ತೊಡುವುದಕ್ಕೆ ಕೆಲವು ತಂಡಗಳಿಗೆ ತಿಳಿಸಿದೆ.
ಈ ಟೂರ್ನಿಯಲ್ಲಿ ಭಾರತ ಅಫ್ಘಾನಿಸ್ಥಾನ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಆರೆಂಜ್ ಜರ್ಸಿ ತೊಡಲಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಇದಲ್ಲದೆ ಮುಂದೆ ನಡೆಯುವ ಐಸಿಸಿ ಟೂರ್ನಿಗಳಲ್ಲೂ ಈ ನಿಯಮ ಜಾರಿಗೆ ಬರಲಿದೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಬಿಟ್ಟು ಉಳಿದ ತಂಡಗಳು ಎರಡು ಬಣ್ಣದ ಜರ್ಸಿಯುಳ್ಳ ಕಿಟ್ಗಳನ್ನು ಪಡೆಯಲಿವೆ.
ಭಾರತವಲ್ಲದೇ, ದ.ಆಫ್ರಿಕಾ,ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಹಸಿರು ಬಣ್ಣದ ಜರ್ಸಿ ತೊಡುತ್ತಿರುವುದರಿಂದ ಈ ಮೂರು ಪಂದ್ಯಗಳು ಎದುರು ಬದುರಾದಾಗ ಬೇರೆ ಬಣ್ಣದ ಜರ್ಸಿ ತೊಡಲಿದ್ದಾರೆ. ಈಗಾಗಲೇ ಬಾಂಗ್ಲಾ ದೇಶ ತಂಡ ಕೆಂಪು ಬಣ್ಣದ ಜರ್ಸಿ ಅನಾವರಣಗೊಳಿಸಿದೆ.