ಬಳ್ಳಾರಿ: ಜಿಂದಾಲ್ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಗುಜರಾತ್ನಿಂದ 18 ನರ್ಸ್ಗಳು ಬಳ್ಳಾರಿಗೆ ರೂಲು ಮೂಲಕ ಆಗಮಿಸಿದ್ದಾರೆ. ಈ ವೇಳೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಸರ್ವ್ ತಂಡದ ಸದಸ್ಯರು ಮತ್ತು ಸ್ವಯಂ ಸೇವಕರು ಹೂಮಳೆ ಸುರಿಸುವ ಮೂಲಕ ಸ್ವಾಗತಿಸಿದರು.
ಕೊರೊನಾ ರೋಗಿಗಳ ಸೇವೆ: ಗುಜರಾತ್ನಿಂದ ಬಳ್ಳಾರಿಗೆ ಬಂದ್ ನರ್ಸ್ಗಳಿಗೆ ಹೂಮಳೆ ಸ್ವಾಗತ - Bellary latest News
ಬಳ್ಳಾರಿಯಲ್ಲಿ ಕೊರೊನಾ ರೋಗಿಗಳಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಗುಜರಾತ್ನಿಂದ 18 ನರ್ಸ್ಗಳು ರಾಜ್ಯಕ್ಕೆ ಆಗಮಿಸಿದ್ದಾರೆ.
gujarat
ನರ್ಸಿಂಗ್ ಕಾಲೇಜಿನಲ್ಲಿ ತರಬೇತಿ ಪಡೆದ 18 ಜನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಲು ಆಗಮಿಸಿದ್ದಾರೆ. ಈ ವಿದ್ಯಾರ್ಥಿಗಳು ಮೂಲತಃ ಗುಜರಾತ್ ರಾಜ್ಯದವರಾದರೂ ಬಳ್ಳಾರಿ ಜಿಲ್ಲೆಯ ಬೆಸ್ಟ್ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ತಮ್ಮ ರಾಜ್ಯಕ್ಕೆ ತೆರಳಿದ್ದರು. ಆದರೆ, ಈಗ ಸೇವೆ ಸಲ್ಲಿಸಲು ತಮ್ಮ ಊರಿನಿಂದ ಬಂದಿದ್ದಾರೆ.
ಆಗಮಿಸಿದ ನರ್ಸ್ಗಳಿಗೆ ಆರ್ಇಟಿ ಟೆಸ್ಟ್ ಮಾಡಲಾಗಿದೆ. ಟೆಸ್ಟ್ ನೆಗೆಟಿವ್ ಬಂದ ನಂತರ ಜಿಂದಾಲಿನ 1000 ಹಾಸಿಗೆಗಳ ಆಸ್ಪತ್ರೆಗೆ ಕಳುಹಿಸಲಾಯಿತು.
Last Updated : May 18, 2021, 10:52 PM IST