ನವದೆಹಲಿ: ಝೈಡಸ್ ಕ್ಯಾಡಿಲಾ(Zydus Cadila) ಕೊರೊನಾ ಲಸಿಕೆಯಾದ ZyCoV-D ಅಕ್ಟೋಬರ್ನ ಆರಂಭದಲ್ಲಿ ಎಲ್ಲರಿಗೂ ದೊರಕುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಮಾಧ್ಯಮ ಸಂಸ್ಥೆಗಳಿಗೆ ಶನಿವಾರ ಮಾಹಿತಿ ನೀಡಿವೆ. ಈ ಹಿಂದೆಯೇ ಅಂದರೆ, ಆಗಸ್ಟ್ 20ರಂದು ಝೈಡಸ್ ಕ್ಯಾಡಿಲಾ ವ್ಯಾಕ್ಸಿನ್ನ ತುರ್ತು ಬಳಕೆಗೆ ಭಾರತದಲ್ಲಿ ಅನುಮತಿ ನೀಡಲಾಗಿತ್ತು.
ZyCoV-D ವಿಶ್ವದ ಮೊದಲ ಡಿಎನ್‌ಎ ವ್ಯಾಕ್ಸಿನ್ ಆಗಿದ್ದು, ಮೂರು ಬಾರಿ ಲಸಿಕೆಯನ್ನು ಪಡೆಯಬೇಕಾಗುತ್ತದೆ. ಮೊದಲ ಲಸಿಕೆ ಪಡೆದ ನಂತರ 28 ದಿನ ಕಾಲ ಕಾಯುಬೇಕಾಗುತ್ತದೆ. ನಂತರ 56ನೇ ದಿನ ಮೂರನೇ ಬಾರಿಯ ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ. ಈಗ ಸದ್ಯಕ್ಕೆ ಅನುಮತಿ ಪಡೆದ ಲಸಿಕೆಯನ್ನು 12 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಹಾಕಲಾಗುತ್ತದೆ.
ZyCoV-D ಲಸಿಕೆಯನ್ನು ಮೂರು ಡೋಸ್ ಹಾಕಿದಾಗ ಅದು ವೈರಸ್ ವಿರುದ್ಧ ಪ್ರೋಟೀನ್ ಅನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ. ಲಸಿಕೆಯ ಪ್ಲಗ್-ಅಂಡ್-ಪ್ಲೇ ತಂತ್ರಜ್ಞಾನ ಪ್ಲಾಸ್ಮಿಡ್ ಡಿಎನ್‌ಎ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವುದರಿಂದ ವೈರಸ್‌ಗಳಲ್ಲಾಗುವ ರೂಪಾಂತರಗಳ ವಿರುದ್ಧ ಹೋರಾಡಲಿದೆ ಎಂದು ಝೈಡಸ್ ಕ್ಯಾಡಿಲಾ ಈ ಹಿಂದೆ ಸ್ಪಷ್ಟನೆ ನೀಡಿತ್ತು.