ಕರ್ನಾಟಕ

karnataka

ETV Bharat / bharat

ಎರ್ನಾಕುಲಂ: ವಿಶ್ವಕಪ್ ಫುಟ್ಬಾಲ್ ಪಂದ್ಯ ವೀಕ್ಷಿಸಲು ಮನೆ ಖರೀದಿಸಿದ ಯುವಕರು

ಎರ್ನಾಕುಲಂನ ಕಂಗರಪೀಡಿಕಾದಲ್ಲಿರುವ 17 ಹುಚ್ಚು ಅಭಿಮಾನಿಗಳು ವಿಶ್ವಕಪ್​ ಪಂದ್ಯವನ್ನು ಯುವಕರೊಂದಿಗೆ ಒಟ್ಟಿಗೆ ನೋಡುವ ಕಾರಣಕ್ಕಾಗಿ ತಮ್ಮಲ್ಲಿನ 23 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಹೊಸ ಮನೆಯನ್ನು ಖರೀದಿಸಿದ್ದಾರೆ.

ವಿಶ್ವಕಪ್ ಫುಟ್ಬಾಲ್ ಪಂದ್ಯ ವೀಕ್ಷಿಸಲು ಮನೆ ಖರೀದಿಸಿದ ಯುವಕರು
ವಿಶ್ವಕಪ್ ಫುಟ್ಬಾಲ್ ಪಂದ್ಯ ವೀಕ್ಷಿಸಲು ಮನೆ ಖರೀದಿಸಿದ ಯುವಕರು

By

Published : Nov 25, 2022, 7:19 PM IST

Updated : Nov 25, 2022, 7:59 PM IST

ಎರ್ನಾಕುಲಂ (ಕೇರಳ) : ಫುಟ್ಬಾಲ್ ವಿಶ್ವಕಪ್ ಪ್ರಾರಂಭವಾದ ಹಿನ್ನೆಲೆ ಅನೇಕಾ ಕ್ರೀಡಾಸಕ್ತರು ಉತ್ಸಾಹಭರಿತರಾಗಿದ್ದಾರೆ. ಅದರಲ್ಲೂ ಕೇರಳದ ಫುಟ್‌ಬಾಲ್ ಪ್ರೇಮಿಗಳು ತಮ್ಮ ನೆಚ್ಚಿನ ತಂಡಗಳನ್ನು ಹುರಿದುಂಬಿಸಲು ಬೃಹತ್ ಪರದೆಗಳನ್ನು ಸ್ಥಾಪಿಸುವ ಮೂಲಕ ಗಮನ ಸೆಳೆದಿದ್ದಾರೆ.

ಎರ್ನಾಕುಲಂನ ಕಂಗರಪೀಡಿಕಾದಲ್ಲಿರುವ 17 ಹುಚ್ಚು ಅಭಿಮಾನಿಗಳು ವಿಶ್ವಕಪ್​ ಪಂದ್ಯವನ್ನು ಯುವಕರೊಂದಿಗೆ ಒಟ್ಟಿಗೆ ನೋಡುವ ಕಾರಣಕ್ಕಾಗಿ ತಮ್ಮಲ್ಲಿನ 23 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಹೊಸ ಮನೆ ಖರೀದಿಸಿದ್ದಾರೆ.

ವಿಶ್ವಕಪ್ ಫುಟ್ಬಾಲ್ ಪಂದ್ಯ ವೀಕ್ಷಿಸಲು ಮನೆ ಖರೀದಿಸಿದ ಯುವಕರು

ಮನೆಯು ಈಗ ದೊಡ್ಡ ಸ್ಮಾರ್ಟ್ ಟಿವಿಯೊಂದಿಗೆ ಮಿನಿ ಥಿಯೇಟರ್ ಆಗಿದೆ ಮತ್ತು ಫುಟ್ಬಾಲ್ ಅಭಿಮಾನಿಗಳಿಗೆ ಪಂದ್ಯಗಳನ್ನು ವೀಕ್ಷಿಸಲು ಕುರ್ಚಿಗಳನ್ನು ಹೊಂದಿದೆ. ಅವರು ವಿವಿಧ ಫುಟ್ಬಾಲ್ ರಾಷ್ಟ್ರಗಳ ಚಿತ್ರಗಳು ಮತ್ತು ಧ್ವಜಗಳಿಂದ ಮನೆಯನ್ನು ಅಲಂಕರಿಸಿದ್ದಾರೆ. ಈಗ ಮಕ್ಕಳು, ವೃದ್ಧರು ಮತ್ತು ಫುಟ್‌ಬಾಲ್ ಅನ್ನು ಪ್ರೀತಿಸುವ ಎಲ್ಲರೂ ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಲು ಈ 'ಫುಟ್‌ಬಾಲ್ ಹೌಸ್' ನಲ್ಲಿ ಸೇರುತ್ತಾರೆ.

'ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಅಥವಾ ಮೊಬೈಲ್ ಫೋನ್‌ಗಳಲ್ಲಿ ಪಂದ್ಯವನ್ನು ವೀಕ್ಷಿಸಬಹುದು. ಆದರೆ, ನೀವು ಗುಂಪಿನಲ್ಲಿ ಪಂದ್ಯವನ್ನು ವೀಕ್ಷಿಸಿದಾಗ ಸಿಗುವ ಸಂತೋಷ ಮತ್ತು ಥ್ರಿಲ್ ಅನುಪಮವಾಗಿದೆ. ಮನೆ ಖರೀದಿಸಲು ನಾವು ಆಲೋಚಿಸಿರಲಿಲ್ಲ. ವಿಶ್ವಕಪ್ ಪಂದ್ಯಗಳು ಪ್ರಾರಂಭವಾದಾಗ ನಾವು ಹಠಾತ್ತನೆ ಅಂತಹ ಆಲೋಚನೆಯನ್ನು ಯೋಚಿಸಿದ್ದೇವೆ. ಅದನ್ನು ಮುಂದುವರಿಸಿದ್ದೇವೆ.

ವಿಶ್ವಕಪ್ ಮುಗಿದ ನಂತರ ನಾವು ಈ ಮನೆಯನ್ನು ಕೆಡವಿ ಸಾಂಸ್ಕೃತಿಕ ಮತ್ತು ಕ್ರೀಡಾ ಕೇಂದ್ರಕ್ಕಾಗಿ ಮತ್ತೊಂದು ಕಟ್ಟಡವನ್ನು ನಿರ್ಮಿಸುತ್ತೇವೆ' ಎಂದು ಪುಟ್ಬಾಲ್ ಪ್ರೇಮಿ ಹಾಗೂ ಮನೆಯ ಮಾಲೀಕ ಪಿ ಕೆ ಹ್ಯಾರಿಸ್​ ಅವರು ಅಭಿಪ್ರಾಯಪಟ್ಟಿದ್ದಾರೆ.

ಓದಿ:ಹೊಲದಲ್ಲಿ ಕೂಲಿ ಮಾಡಿ ತಂದೆಯನ್ನು ಪೋಷಿಸುತ್ತಿರುವ ರಾಷ್ಟ್ರೀಯ ಫುಟ್ಬಾಲ್​ ಆಟಗಾರ್ತಿ

Last Updated : Nov 25, 2022, 7:59 PM IST

ABOUT THE AUTHOR

...view details