ಕರ್ನಾಟಕ

karnataka

ETV Bharat / bharat

ಒಂದೇ ಒಂದು ಸಲ ಹುಡುಗಿ ಜೊತೆ ಮಾತನಾಡಲು ಬಿಡಿ.. ಪೊಲೀಸ್​ ಠಾಣೆ ಮುಂದೆ ಚಾಕು ಹಿಡಿದು ಯುವಕನ ಹೈಡ್ರಾಮಾ

ಪಶ್ಚಿಮ ಬಂಗಾಳದಲ್ಲಿ ಪೊಲೀಸ್​ ಠಾಣೆ ಮುಂದೆ ಚಾಕು ಹಿಡಿದುಕೊಂಡು ಯುವಕನೊಬ್ಬ ಒಮ್ಮೆಯಾದರೂ ತನ್ನ ಹುಡುಗಿ ಜೊತೆ ಮಾತನಾಡಲು ಅವಕಾಶ ನೀಡಬೇಕೆಂದು ಹೇಳಿ ಸುಮಾರು ಎರಡು ಗಂಟೆ ಕಾಲಗಳ ಹೈಡ್ರಾಮಾ ಸೃಷ್ಟಿ ಮಾಡಿದ್ದಾರೆ.

youth-takes-himself-at-knifepoint-in-pujali-know-why
ಒಂದೇ ಒಂದು ಸಲ ಹುಡುಗಿ ಜೊತೆ ಮಾತನಾಡಲು ಬಿಡಿ... ಪೊಲೀಸ್​ ಠಾಣೆ ಮುಂದೆ ಚಾಕು ಹಿಡಿದು ಯುವಕನ ಹೈಡ್ರಾಮಾ

By

Published : Oct 14, 2022, 7:38 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ತನ್ನ ಹುಡುಗಿ ಜೊತೆಗೆ ಮಾತನಾಡಲು ಅವಕಾಶ ಕೊಡಬೇಕೆಂದು ಕೋರಿ ಯುವಕನೊಬ್ಬ ಚಾಕು ಹಿಡಿದುಕೊಂಡು ಪೊಲೀಸ್​ ಠಾಣೆ ಮುಂದೆ ಹೈಡ್ರಾಮಾ ಮಾಡಿರುವ ಘಟನೆ ಶನಿವಾರ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಪುಜಾಲಿ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ ಮಾಯಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿರ್ಲಾಪುರ ನಿವಾಸಿ, 22 ವರ್ಷದ ಶೇಖ್ ಸೋಹಿಲ್ ಎಂಬ ಯುವಕನೇ ಹುಡುಗಿ ಜೊತೆ ಮಾತನಾಡಲು ಒಮ್ಮೆಯಾದರೂ ಅವಕಾಶ ನೀಡಿ.. ಇಲ್ಲವಾದಲ್ಲಿ ಚಾಕುವಿನಿಂದ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿ ಹೈಡ್ರಾಮಾ ಸೃಷ್ಟಿಸಿದ್ದಾರೆ.

ಒಂದೇ ಒಂದು ಸಲ ಹುಡುಗಿ ಜೊತೆ ಮಾತನಾಡಲು ಬಿಡಿ... ಪೊಲೀಸ್​ ಠಾಣೆ ಮುಂದೆ ಚಾಕು ಹಿಡಿದು ಯುವಕನ ಹೈಡ್ರಾಮಾ

ಯುವಕನ ಹೈಡ್ರಾಮಾಕ್ಕೆ ಕಾರಣವೇನು?:ಪುಜಾಲಿ ಪಟ್ಟಣದ ಬಾಲಕಿಯನ್ನು ಶೇಖ್ ಸೋಹಿಲ್ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಸೋಹಿಲ್​ ಮನೆಯವರು ಒಪ್ಪಿಕೊಂಡಿದ್ದರು. ಆದರೆ, ಬಾಲಕಿಯ ಪೋಷಕರು ವಿರೋಧ ಹೊಂದಿದ್ದರು. ಹೀಗಾಗಿ 22 ದಿನಗಳ ಹಿಂದೆ ಬಾಲಕಿಯನ್ನು ಕರೆದುಕೊಂಡು ಓಡಿ ಸಹ ಹೋಗಿದ್ದರು. ಈ ವೇಳೆ, ಹೋಟೆಲ್‌ನಲ್ಲಿ ಮೂರು ದಿನ ಕಳೆದ ನಂತರ ಇಬ್ಬರೂ ಮನೆಗೆ ಮರಳಿದ್ದರು.

ಇದಾದ ನಂತರ ಬಾಲಕಿಯ ಕುಟುಂಬಸ್ಥರು ಶೇಖ್ ಸೋಹಿಲ್ ವಿರುದ್ಧ ಪುಜಾಲಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಶೇಖ್ ಸೋಹಿಲ್ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಜೈಲಿಗೂ ಕಳುಹಿಸಿದ್ದರು.

ಇದನ್ನೂ ಓದಿ:ಹೃದಯವಿದ್ರಾವಕ ಘಟನೆ: ಕೊಲೆಯಾದ ಮಗಳು, ಆತ್ಮಹತ್ಯೆ ಮಾಡಿಕೊಂಡ ತಂದೆ, ತಾಯಿಗೆ ಕ್ಯಾನ್ಸರ್​​

ಈ ನಡುವೆ ಶೇಖ್ ಸೋಹಿಲ್ ಯುವಕ ಮತ್ತು ಆತನ ತಂದೆ ಜಾಮೀನಿನ ಹೊರ ಬಂದಿದ್ದಾರೆ. ಸದ್ಯ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪೊಲೀಸ್​ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬಾಲಕಿ ಹಾಗೂ ಆಕೆಯನ್ನು ತಂದೆಯನ್ನು ಠಾಣೆಗೆ ಕರೆಸಿದ್ದರು. ಈ ವಿಷಯ ಅರಿತ ಸೋಹಿಲ್ ಸಹ ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಬಾಲಕಿ ಮತ್ತು ಆಕೆಯ ತಂದೆ ಪೊಲೀಸ್ ಠಾಣೆಗೆ ಪ್ರವೇಶಿಸಿದಾಗಿನಿಂದಲೂ ಚಾಕು ಹಿಡಿದುಕೊಂಡು ಠಾಣೆಯ ಎದುರೇ ನಿಂತಿದ್ದಾರೆ.

ಎರಡು ಗಂಟೆ ಕಾಲಗಳ ಠಾಣೆ ಮುಂದೆ ಹೈಡ್ರಾಮಾ: ಒಂದೇ ಒಂದು ಸಲ ಹುಡುಗಿ ಜೊತೆ ಮಾತನಾಡಲು ಅವಕಾಶ ಮಾಡಿಕೊಡಿ ಎಂದು ಶೇಖ್ ಸೋಹಿಲ್ ಒತ್ತಾಯಿಸಲು ಶುರು ಮಾಡಿದ್ದಾರೆ. ಆದರೆ, ಇದಕ್ಕೆ ಅವಕಾಶ ನೀಡಲು ಪೊಲೀಸರು ಮತ್ತು ಹುಡುಗಿಯ ಮನೆಯವರು ಸಿದ್ಧರಲಿಲ್ಲ. ಆದರೂ, ಪಟ್ಟು ಬಿಡಿದ ಶೇಖ್ ಸೋಹಿಲ್ ಒಮ್ಮೆಯಾದರೂ ಮಾತನಾಡಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಹೀಗೆ ಸುಮಾರು ಎರಡು ಗಂಟೆ ಕಾಲಗಳ ಠಾಣೆ ಮುಂದೆ ಹೈಡ್ರಾಮಾ ಸೃಷ್ಟಿ ಮಾಡಿದ್ದಾರೆ.

ಇದರ ನಡುವೆಯೂ ಪೊಲೀಸರು ಬಾಲಕಿ ಮತ್ತು ಆಕೆಯ ತಂದೆಯನ್ನು ಮನೆಗೆ ಕಳುಹಿಸಿದ್ದಾರೆ. ಆಗ ಶೇಖ್ ಸೋಹಿಲ್ ಕೂಡ ಬೈಕ್ ಹತ್ತಿ ಹೋಗಲು ಯತ್ನಿಸಿದ್ದಾರೆ. ತಕ್ಷಣವೇ ಪೊಲೀಸರು ಧಾವಿಸಿ ಸೋಹಿಲ್​ನನ್ನು ಠಾಣೆಯೊಳಗೆ ಪೊಲೀಸರು ಕರೆದೊಯ್ದಿದ್ದಾರೆ. ಯುವಕನ ಹೈಡ್ರಾಮಾದಿಂದ ಪೊಲೀಸ್​ ಠಾಣೆ ಸಮೀಪ ಸಾಕಷ್ಟು ಜನ ಸೇರಿದ್ದರು.

ಇದನ್ನೂ ಓದಿ:ಕೇರಳದಲ್ಲಿ ಮಾಟ ಮಂತ್ರ ಪ್ರಕರಣ: ತನ್ನನ್ನು ವಿರೋಧಿಸಿದರೆ 41 ದಿನದಲ್ಲಿ ಸಾಯಿಸುವುದಾಗಿ ಭಯ ಹುಟ್ಟಿಸಿದ್ದ ಮಹಿಳೆ

ABOUT THE AUTHOR

...view details