ಕರ್ನಾಟಕ

karnataka

ETV Bharat / bharat

ಗೆಳತಿಯೊಂದಿಗೆ ಲಾಡ್ಜ್‌ಗೆ ಹೋಗಿದ್ದ ಯುವಕ ಇದ್ದಕ್ಕಿದ್ದಂತೆ ಸಾವು: ಶಕ್ತಿ ಹೆಚ್ಚಿಸುವ ಮಾತ್ರೆ ಸೇವಿಸಿರುವ ಶಂಕೆ - A 25 year old man who went to a lodge with his girlfriend has died under suspicious circumstances

ಗೆಳತಿ ಜೊತೆ ಲಾಡ್ಜ್​ಗೆ ಹೋಗಿದ್ದ ಯುವಕ ಸಾವಿಗೀಡಾಗಿದ್ದಾನೆ. ಶಕ್ತಿ ಹೆಚ್ಚಿಸುವ ಮಾತ್ರೆಗಳ ಮಿತಿಮೀರಿದ ಸೇವನೆಯಿಂದ ಈ ರೀತಿ ಆಗಿರಬಹುದು ಎಂದು ಶಂಕಿಸಲಾಗಿದೆ.

ಗೆಳತಿಯೊಂದಿಗೆ ಲಾಡ್ಜ್‌ಗೆ ಹೋಗಿದ್ದ ಯುವಕ ಸಾವು: ಶಕ್ತಿ ಹೆಚ್ಚಿಸುವ ಮಾತ್ರೆ ಸೇವಿಸಿರುವ ಶಂಕೆ
ಗೆಳತಿಯೊಂದಿಗೆ ಲಾಡ್ಜ್‌ಗೆ ಹೋಗಿದ್ದ ಯುವಕ ಸಾವು: ಶಕ್ತಿ ಹೆಚ್ಚಿಸುವ ಮಾತ್ರೆ ಸೇವಿಸಿರುವ ಶಂಕೆ

By

Published : Jul 4, 2022, 8:44 PM IST

ನಾಗ್ಪುರ: ತನ್ನ ಗೆಳತಿಯೊಂದಿಗೆ ಲಾಡ್ಜ್‌ಗೆ ಹೋಗಿದ್ದ 25 ವರ್ಷದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ನಾಗ್ಪುರ ಜಿಲ್ಲೆಯ ಸಾವ್ನರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಅಜಯ್ ಪರತೇಕಿ ಸಾವಿಗೀಡಾದವ. ಶಕ್ತಿ ಹೆಚ್ಚಿಸುವ ಮಾತ್ರೆಗಳ ಮಿತಿಮೀರಿದ ಸೇವನೆಯಿಂದ(stamina-enhancing pills) ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಮೃತನ ಜೇಬಿನಲ್ಲಿ ಶಕ್ತಿ ಹೆಚ್ಚಿಸುವ ಮಾತ್ರೆಗಳ ಪ್ಯಾಕೆಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವರ: ನಿನ್ನೆ ಸಂಜೆ ಅಜಯ್ ಮತ್ತು ಆತನ ಗೆಳತಿ ಸಾವ್ನರ್‌ನಲ್ಲಿರುವ ಲಾಡ್ಜ್‌ಗೆ ಹೋಗಿದ್ದರು. ಲಾಡ್ಜ್‌ಗೆ ತೆರಳಿದ ಅಜಯ್ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಈ ಬಗ್ಗೆ ಅಜಯ್ ಗೆಳತಿ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದವರಿಗೆ ಮಾಹಿತಿ ನೀಡಿದ್ದು, ಅಜಯ್ ಗೆಳೆಯರಿಗೂ ಕರೆ ಮಾಡಿದ್ದಾರೆ.ಇದಾದ ನಂತರ ಅಜಯ್‌ನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿದೆ. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಸಾವಿಗೀಡಾದ ನಂತರ ಸವ್ನರ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಜಯ್ ಜೇಬಿನಲ್ಲಿ ಶಕ್ತಿ ಹೆಚ್ಚಿಸುವ ಮಾತ್ರೆಗಳ ಪ್ಯಾಕೆಟ್ ಪೊಲೀಸರಿಗೆ ಸಿಕ್ಕಿದ್ದು, ಈ ಮಾತ್ರೆಗಳನ್ನು ಅತಿಯಾಗಿ ಸೇವಿಸಿದ ಪರಿಣಾಮ ಅಜಯ್ ಸಾವಿಗೀಡಾಗಿರಬಹುದು ಎಂಬುದು ಪೊಲೀಸರ ಶಂಕೆಯಾಗಿದೆ.

ಇದನ್ನೂ ಓದಿ: ಎಡಿಜಿಪಿ ಬಂಧನ ಬೆನ್ನಲ್ಲೇ ಗೃಹ ಸಚಿವರ ರಾಜೀನಾಮೆಗೆ ಡಿಕೆಶಿ ಆಗ್ರಹ

For All Latest Updates

TAGGED:

ABOUT THE AUTHOR

...view details