ಹೈದರಾಬಾದ್ (ತೆಲಂಗಾಣ): ನೂರು ವರ್ಷ ದಾಟಿದ ವೃದ್ಧರೇ ಧೈರ್ಯದಿಂದ ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಓದು-ಬರಹ ಗೊತ್ತಿಲ್ಲದ ರಿಮೋಟ್ ಪ್ರದೇಶದ ಜನರೂ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇಲ್ಲೊಬ್ಬ 22 ವರ್ಷದ ಯುವಕ ಲಸಿಕೆಗೆ ಹೆದರಿ ಜೀವ ಬಿಟ್ಟಿದ್ದಾನೆ.
ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಮೂಲದ ಶವಿ ಪ್ರಕಾಶ್ ಎಂಬ ಯುವಕ ಪೋಷಕರೊಂದಿಗೆ ತೆಲಂಗಾಣದ ಹೈದರಾಬಾದ್ಗೆ ಬಂದು ವಾಸವಿದ್ದು, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಕೊರೊನಾ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದ ಆತ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಭಯಪಡುತ್ತಿದ್ದ. ಪೋಷಕರು ಲಸಿಕೆ ಪಡೆಯುವಂತೆ ಬಲವಂತ ಮಾಡಿದ್ದು, ಮನೆಯಿಂದ ಹೊರ ಹೋದ ಪ್ರಕಾಶ್ ಕೀಟಿನಾಶಕ ಸೇವಿಸಿದ್ದಾನೆ.
ಇದನ್ನೂ ಓದಿ: 124 ವರ್ಷದ ಅಜ್ಜಿಗೆ ಕೊರೊನಾ ಲಸಿಕೆ... ಈ ಅಜ್ಜಿಎಲ್ಲಿಯವರು ಅಂತೀರಾ?