ಕರ್ನಾಟಕ

karnataka

ETV Bharat / bharat

ಜಮ್ಮು-ಕಾಶ್ಮೀರದ ಯುವಕನಿಂದ 6 ಸೀಟುಗಳ ವಿಮಾನಯಾನ ಸಂಸ್ಥೆ ಆರಂಭ

ರೈನಾ ಅವರು ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದ ಏರ್ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಆದರೆ, ಕಣಿವೆ ರಾಜ್ಯದಲ್ಲಿ ಕಳಪೆ ಹವಾಮಾನ ಕಾರಣದಿಂದ ಅದು ವಿಳಂಬವಾಗುತ್ತಿದೆಯಂತೆ..

aircraft
ವಿಮಾನಯಾನ

By

Published : Jan 28, 2022, 3:21 PM IST

ಜಮ್ಮು(ಜಮ್ಮು-ಕಾಶ್ಮೀರ) :ಕಣಿವೆ ರಾಜ್ಯದ ಯುವಕನೊಬ್ಬ ತನ್ನದೇ ಆದ ಚಿಕ್ಕ ವಿಮಾನಸಂಸ್ಥೆ ಆರಂಭಿಸಲು ಮುಂದಾಗಿದ್ದಾನೆ. 6 ಸೀಟುಗಳ ಏರ್​ ಆ್ಯಂಬುಲೆನ್ಸ್​ ನಡೆಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿಗದಿತವಲ್ಲದ ಪರವಾನಿಗೆ ಕೂಡ ಪಡೆದಿದ್ದಾನೆ.

ಜಮ್ಮುವಿನ ದಲ್ಪತಿಯ ಮೊಹಲ್ಲಾ ನಿವಾಸಿಯಾದ ಕ್ಯಾಪ್ಟನ್​ ರೋಹನೀತ್​ ಸಿಂಗ್​ ರೈನಾ ಸ್ವತಃ ವಿಮಾನ ಹೊಂದಲು ಬಯಸಿದ ಯುವಕ. ರೋಹನೀತ್​ ಕೆನಡಾದ ವ್ಯಾಂಕೋವರ್‌ನಲ್ಲಿರುವ ಫ್ಲೈಟ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಇವರು ತರಬೇತಿ ವೇಳೆ ಒಬ್ಬರೇ 17 ಗಂಟೆ ಕಾಲ ವಿಮಾನ ಹಾರಾಟ ನಡೆಸಿ ಅತ್ಯುತ್ತಮ ಪೈಲಟ್​ ಆಗಿ ಹೊರಹೊಮ್ಮಿದ್ದಾರೆ.

ಓದಿ: ಹೈದರಾಬಾದ್​ನಲ್ಲಿ ಉದ್ಘಾಟನೆಗೆ ಸಿದ್ಧವಾದ ಅತಿ ದೊಡ್ಡ ವಸತಿ ಯೋಜನೆ

ರೈನಾ ಅವರು ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದ ಏರ್ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಆದರೆ, ಕಣಿವೆ ರಾಜ್ಯದಲ್ಲಿ ಕಳಪೆ ಹವಾಮಾನ ಕಾರಣದಿಂದ ಅದು ವಿಳಂಬವಾಗುತ್ತಿದೆಯಂತೆ.

ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿರುವ ರೈನಾ, ಕೇಂದ್ರ ಸರ್ಕಾರದಿಂದ ವಿಮಾನಯಾನ ಸಂಸ್ಥೆ ನಡೆಸಲು ಪರವಾನಿಗೆ ಲಭ್ಯವಾಗಿದೆ. ಈ ಮೊದಲು ನಾನು 10 ಆಸನಗಳ ವಿಮಾನವನ್ನು ಆರಂಭಿಸಲು ಮುಂದಾಗಿದ್ದೆ. ಆದರೆ, ಅದು ಭಾರತದಲ್ಲಿ ಲಭ್ಯವಿಲ್ಲದ ಕಾರಣ 6 ಆಸನಗಳ ವಿಮಾನ ಸೇವೆಯನ್ನು ಆಯ್ದುಕೊಂಡೆ ಎಂದು ಹೇಳಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details