ಲಖನೌ(ಉತ್ತರ ಪ್ರದೇಶ):ಉತ್ತರ ಪ್ರದೇಶದ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ, ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಹೊರಹಾಕಿದ್ದು, ಈ ಆದೇಶ ಇಂದಿನಿಂದಲೇ ಜಾರಿಗೊಳ್ಳಲಿದೆ ಎಂದು ಅಲ್ಪಸಂಖ್ಯಾತ ಸಮುದಾಯದ ಸಚಿವ ದಾನಿಶ್ ಆಜಾದ್ ಅನ್ಸಾರಿ ಮಾಹಿತಿ ನೀಡಿದ್ದಾರೆ.
ಮದರಸಾಗಳಲ್ಲಿ ಪ್ರತಿದಿನದ ಪಾಠ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ರಾಷ್ಟ್ರಗೀತೆ ಕಡ್ಡಾಯಗೊಳಿಸಲಾಗಿದೆ ಎಂದಿರುವ, ಅವರು, ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗಿಯಾಗಿ ಹಾಡುವಂತೆ ತಿಳಿಸಲಾಗಿದೆ.
ಇದನ್ನೂ ಓದಿ:ತಹಶೀಲ್ದಾರ್ ಕಚೇರಿ ಮೇಲೆ ಉಗ್ರರ ದಾಳಿ: ಕಾಶ್ಮೀರಿ ಪಂಡಿತ ನೌಕರ ಸಾವು
ಕಳೆದ ಮಾರ್ಚ್ 24ರಂದು ಅಲ್ಪಸಂಖ್ಯಾತ ಸಚಿವರೊಂದಿಗೆ ನಡೆದ ಮದರಸಾ ಜೊತೆಗಿನ ಸಭೆಯಲ್ಲಿ ರಾಷ್ಟ್ರಗೀತೆ ಕಡ್ಡಾಯವಾಗಿ ಪಠಿಸುವಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ, ಇದನ್ನ ಅಲ್ಲಿನ ಸರ್ಕಾರ ಕಡ್ಡಾಯಗೊಳಿಸಿರಲಿಲ್ಲ. ಆದರೆ, ಇದೀಗ ಕಡ್ಡಾಯಗೊಳಿಸಿ ಆದೇಶ ಹೊರಹಾಕಿದೆ. ರಂಜಾನ್ ನಿಮಿತ್ತ ಮಾರ್ಚ್ 30ರಿಂದ ಮೇ 11ರವರೆಗೆ ರಾಜ್ಯದ ಎಲ್ಲ ಮದರಸಾಗಳು ಬಂದ್ ಆಗಿದ್ದವು. ಇಂದಿನಿಂದ ಮದರಸಾ ಶಾಲೆಗಳು ಪುನಾರಂಭಗೊಂಡಿರುವ ಕಾರಣ ರಾಷ್ಟ್ರಗೀತೆ ಹಾಡುವುದು ಕಡ್ಡಾಯಗೊಳಿಸಲಾಗಿದೆ.