ಕರ್ನಾಟಕ

karnataka

ETV Bharat / bharat

Tokyo Olympics Wrestling: ಕ್ವಾರ್ಟರ್​ ಫೈನಲ್​ನಲ್ಲಿ ಪರಾಭವಗೊಂಡ ವಿನೇಶ್ ಪೋಗಟ್ - ಸ್ವೀಡನ್‌ನ ಸೋಫಿಯಾ ಮ್ಯಾಗ್ಡಲೇನಾ ಮ್ಯಾಟ್ಸನ್

ಬೆಲಾರಸ್​ನ ವೆನೆಸಾ ಕಲದಿಜಿಂಸ್ಕಯಾ ಅವರ ವಿರುದ್ಧ ಕ್ವಾರ್ಟರ್​ ಫೈನಲ್​​ನಲ್ಲಿ ಸ್ಪರ್ಧಿಸಿದ್ದ ಭಾರತೀಯ ಕುಸ್ತಿಪಟು ವಿನೇಶ್ ಪೋಗಟ್ ಪರಾಭವಗೊಂಡಿದ್ದಾರೆ.

Tokyo Olympics Wrestling : ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟ ವಿನೇಶ್ ಪೋಗಟ್
Tokyo Olympic Wrestling : ಕ್ವಾರ್ಟರ್​ ಫೈನಲ್​ಗೆ ಲಗ್ಗೆ ಇಟ್ಟ ವಿನೇಶ್ ಪೋಗಟ್

By

Published : Aug 5, 2021, 8:22 AM IST

Updated : Aug 5, 2021, 2:44 PM IST

ಟೋಕಿಯೊ(ಜಪಾನ್)​​:ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸ್ವೀಡನ್‌ನ ಸೋಫಿಯಾ ಮ್ಯಾಗ್ಡಲೇನಾ ಮ್ಯಾಟ್ಸನ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದ ವಿನೇಶ್ ಪೋಗಟ್‌ ಬೆಲಾರಸ್​ನ ಸ್ಪರ್ಧಿ ವಿರುದ್ಧ ಸೋಲು ಅನುಭವಿಸಿದ್ದಾರೆ.

ಬೆಲಾರಸ್​ನ ವೆನೆಸಾ ಕಲದಿಜಿಂಸ್ಕಯಾ ಅವರ ವಿರುದ್ಧ ಕ್ವಾರ್ಟರ್​ ಫೈನಲ್​​ನಲ್ಲಿ ಸ್ಪರ್ಧಿಸಿದ್ದ ಅವರು 9-3 ಅಂಕಗಳಿಂದ ಪರಾಭವಗೊಂಡಿದ್ದಾರೆ. ಇದರಿಂದ ಭಾರತದ ಪದಕದ ಆಸೆಗೆ ನೀರೆರಚಿದಂತಾಗಿದೆ.

ಇದಕ್ಕೂ ಮೊದಲು ಸ್ವೀಡನ್‌ನ ಸೋಫಿಯಾ ಮ್ಯಾಗ್ಡಲೇನಾ ಮ್ಯಾಟ್ಸನ್ ವಿರುದ್ಧ ಸ್ಪರ್ಧಿಸಿದ್ದ ವಿನೇಶ್‌ ಪಂದ್ಯದುದ್ದಕ್ಕೂ ಪೋಗಟ್​​ ಮುಂಚೂಣಿಯಲ್ಲಿದ್ದು, ಆಕ್ರಮಣಕಾರಿ ಆಟ ಪ್ರದರ್ಶಿಸಿ ಗೆಲುವು ಸಾಧಿಸಿದ್ದರು.

ಹಿಂದಿನ ಬಾರಿ ರಿಯೋ ಒಲಿಂಪಿಕ್​ನ ವೇಳೆ ಗಾಯದ ಸಮಸ್ಯೆಯಿಂದ ಬಳಲಿದ್ದ ವಿನೇಶ್ ಪೋಗಟ್ ಈ ಬಾರಿ ಪದಕದ ಭರವಸೆ ಮೂಡಿಸಿದ್ದರು. ಆದರೆ ಬೆಲಾರಸ್ ವಿರುದ್ಧ ಸೋಲನ್ನು ಅನುಭವಿಸಿದ್ದು, ಪದಕ ಪಡೆಯಲು ವಿಫಲರಾಗಿದ್ದಾರೆ.

ಇದನ್ನೂ ಓದಿ:ದೇಶದ ಮೊದಲ ಸ್ವದೇಶಿ ವಿಮಾನವಾಹಕ INS​ ವಿಕ್ರಾಂತ್ ಪರೀಕ್ಷಾರ್ಥ ಸಂಚಾರ- ವಿಡಿಯೋ

Last Updated : Aug 5, 2021, 2:44 PM IST

ABOUT THE AUTHOR

...view details