ಕರ್ನಾಟಕ

karnataka

ETV Bharat / bharat

ಅರುಣಾಚಲ ಪ್ರದೇಶದಲ್ಲಿ ಹಿಮಕುಸಿತದಿಂದ ಮಡಿದ ಸೈನಿಕರಿಗೆ ಪುಷ್ಪ ನಮನ - ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್‌ನ ಸಾವನ್ನಪ್ಪಿದ ಏಳು ಸೈನಿಕರಿಗೆ ಪುಷ್ಪ ನಮನ

ಜನರಲ್ ಆಫೀಸರ್ ಕಮಾಂಡಿಂಗ್, ಗಜರಾಜ್ ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ರವೀನ್ ಖೋಸ್ಲಾ ಮತ್ತು ಇತರ ಮಿಲಿಟರಿ ಅಧಿಕಾರಿಗಳು, ವೀರರಿಗೆ ಅಂತಿಮ ನಮನ ಸಲ್ಲಿಸಿದರು. ನಂತರ, ಪಾರ್ಥಿವ ಶರೀರವನ್ನು ಸೈನಿಕರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು..

Wreath-laying ceremony
ಹಿಮಕುಸಿತದಿಂದ ಸಾವನ್ನಪ್ಪಿದ ಸೈನಿಕರಿಗೆ ಪುಷ್ಪ ನಮನ

By

Published : Feb 12, 2022, 4:46 PM IST

ಸೋನಿತ್ಪುರ್(ಅಸ್ಸೋಂ) :ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್‌ನ ಎತ್ತರದ ಪ್ರದೇಶದಲ್ಲಿ ಹಿಮ ಕುಸಿತಕ್ಕೆ ಬಲಿಯಾದ ಏಳು ಸೈನಿಕರ ಪರಮೋಚ್ಛ ತ್ಯಾಗಕ್ಕೆ ಗೌರವ ಸಲ್ಲಿಸಲು ಅಸ್ಸೋಂನ ತೇಜ್‌ಪುರ್ ಏರ್‌ಫೋರ್ಸ್ ಸ್ಟೇಷನ್‌ನಲ್ಲಿ ಇಂದು ಪುಷ್ಪ ನಮನ ಸಮಾರಂಭ ನಡೆಯಿತು.

ತೇಜ್‌ಪುರ ವಾಯುಪಡೆಯ ನಿಲ್ದಾಣದಲ್ಲಿ ಕರ್ತವ್ಯದ ಸಾಲಿನಲ್ಲಿ ಅತ್ಯುನ್ನತ ತ್ಯಾಗ ಮಾಡಿದ ಹವ್ ಜುಗಲ್ ಕಿಶೋರ್, ಆರ್​ಎಫ್ಎನ್ ಅರುಣ್ ಕಟ್ಟಾಲ್, ಆರ್​ಎಫ್ಎನ್ ಅಕ್ಷಯ್ ಪಠಾನಿಯಾ, ಆರ್​ಎಫ್ಎನ್ ವಿಶಾಲ್ ಶರ್ಮಾ, ಆರ್​ಎಫ್ಎನ್ ರಾಕೇಶ್ ಸಿಂಗ್, ಆರ್​ಎಫ್ಎನ್ ಅಂಕೇಶ್ ಭಾರದ್ವಾಜ್ ಮತ್ತು ಜಿಎನ್ಆರ್ (ಟಿಎ) ಗುರ್ಬಾಜ್ ಸಿಂಗ್ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಜನರಲ್ ಆಫೀಸರ್ ಕಮಾಂಡಿಂಗ್, ಗಜರಾಜ್ ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ರವೀನ್ ಖೋಸ್ಲಾ ಮತ್ತು ಇತರ ಮಿಲಿಟರಿ ಅಧಿಕಾರಿಗಳು, ವೀರರಿಗೆ ಅಂತಿಮ ನಮನ ಸಲ್ಲಿಸಿದರು. ನಂತರ, ಪಾರ್ಥಿವ ಶರೀರವನ್ನು ಸೈನಿಕರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.

ಓದಿ:ಸೇನೆಯಿಂದ ಓಡಿ ಬಂದು, ಸೇನಾ ಸಮವಸ್ತ್ರ ಧರಿಸಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ವ್ಯಕ್ತಿ ಬಂಧನ

For All Latest Updates

ABOUT THE AUTHOR

...view details