ನಾಹನ್ (ಹಿಮಾಚಲ ಪ್ರದೇಶ): ಇಲ್ಲಿನ ಶಿವಾಲಿಕ್ ಬೆಟ್ಟದಲ್ಲಿ ವಿಶ್ವದ ಅತ್ಯಂತ ವಿಷಕಾರಿ ಸರ್ಪ ಕಿಂಗ್ ಕೋಬ್ರಾ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಇಡೀ ರಾಜ್ಯದಲ್ಲಿಯೇ ಕಾಳಿಂಗ ಸರ್ಪ ಪತ್ತೆಯಾಗಿರಲಿಲ್ಲವಂತೆ. ಕಳೆದ ಐದಾರು ದಿನಗಳಿಂದ ಹಾವಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದಾದ ಎರಡ್ಮೂರು ದಿನಗಳಲ್ಲಿ ಕೋಲಾರ್ ಪಂಚಾಯತ್ನ ಫಾಂಡಿ ಗ್ರಾಮದಲ್ಲಿ ಬೃಹತ್ ಗಾತ್ರದ ಹಾವು ಪತ್ತೆಯಾಗಿದೆ.
ಕಿಂಗ್ ಕೋಬ್ರಾ ನೋಡಲು ಮುಗಿಬಿದ್ದ ಜನ
ವನ್ಯಜೀವಿ ತಜ್ಞರ ಪ್ರಕಾರ ಕಿಂಗ್ ಕೋಬ್ರಾ ದಟ್ಟ ಮಳೆ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅಲ್ಲದೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇವುಗಳ ಸಂತತಿ ಹೇರಳವಾಗಿದೆ. ಇದಲ್ಲದೆ ಉತ್ತರಾಖಂಡ್ನ ಕೆಲವು ಜಿಲ್ಲೆಯಲ್ಲೂ ಇವು ಕಂಡುಬಂದಿದ್ದವು, ಆದರೆ ಹಿಮಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು, ಇದೇ ಮೊದಲು ಎಂದಿದ್ದಾರೆ.