ನವದೆಹಲಿ: 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಅಂದಾಜು ಬೆಳವಣಿಗೆಯು ಶೇ.6.3ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಸವಾಲಿನ ಜಾಗತಿಕ ವಾತಾವರಣದ ನಡುವೆಯೂ ದೇಶವು ಚೇತರಿಕೆಯನ್ನು ಮುಂದುವರೆಸಿದೆ ಎಂದು ಗಮನಿಸಿದ್ದು, ತನ್ನ ಏಪ್ರಿಲ್ ವರದಿಯಲ್ಲಿ 2023-24ರ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಶೇ.6.6ರಿಂದ ಶೇ.6.3ಕ್ಕೆ ವಿಶ್ವಬ್ಯಾಂಕ್ ಕಡಿತಗೊಳಿಸಿದೆ. ಈಗಲೂ ಅದೇ ಡಿಜಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ವರ್ಲ್ಡ್ಬ್ಯಾಂಕ್ ನೀಡಿದೆ.
ಮಂಗಳವಾರ ಬಿಡುಗಡೆಯಾದ ವಿಶ್ವಬ್ಯಾಂಕ್‌ನ ಭಾರತ ಅಭಿವೃದ್ಧಿ ನವೀಕರಣ (India Development Update - IDU) ಪ್ರಕಾರ, ಭಾರತೀಯ ಆರ್ಥಿಕತೆಯ ಕುರಿತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಪ್ರಮುಖ ಅರ್ಧವಾರ್ಷಿಕ ವರದಿಯು ಗಮನಾರ್ಹ ಜಾಗತಿಕ ಸವಾಲುಗಳ ಹೊರತಾಗಿಯೂ, ಭಾರತವು 2022-23ರಲ್ಲಿ ಶೇ.7.2 ನಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಗಮನಿಸಿದೆ.
ಭಾರತದ ಬೆಳವಣಿಗೆ ದರವು ಜಿ-20 ದೇಶಗಳಲ್ಲಿ ಎರಡನೇ ಅತಿ ಹೆಚ್ಚು ಮತ್ತು ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳಿಗೆ ಸರಾಸರಿ ಎರಡು ಪಟ್ಟು ಹೆಚ್ಚಾಗಿದೆ. ಈ ಸ್ಥಿತಿಸ್ಥಾಪಕತ್ವವು ದೃಢವಾದ ದೇಶೀಯ ಬೇಡಿಕೆ, ಬಲವಾದ ಸಾರ್ವಜನಿಕ ಮೂಲಸೌಕರ್ಯ ಹೂಡಿಕೆ ಮತ್ತು ಬಲಪಡಿಸುವ ಆರ್ಥಿಕ ವಲಯವನ್ನು ಆಧರಿಸಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಈ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಬ್ಯಾಂಕ್ ಸಾಲವು ಮೊದಲ ತ್ರೈಮಾಸಿಕದಲ್ಲಿ ಶೇ.15.8ರಷ್ಟು ಬೆಳೆದಿದೆ. ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ ಸಾಲವು ಶೇ13.3ರಷ್ಟಿತ್ತು.