ಪಶ್ಚಿಮ ಗೋದಾವರಿ(ಆಂಧ್ರಪ್ರದೇಶ):ಒಂದು ಪಪ್ಪಾಯ ಮರದಲ್ಲಿ ಎಷ್ಟು ಹಣ್ಣುಗಳನ್ನು ನೀವು ನೋಡಿರುತ್ತೀರಿ.. 5, 10 ಹೆಚ್ಚೆಂದರೆ 15 ನೋಡಿರಬಹುದು. ಆದರೆ ಇಲ್ಲೊಂದು ಮರದಲ್ಲಿ ಸುಮಾರು 200ಕ್ಕೂ ಹೆಚ್ಚು ಪಪ್ಪಾಯಿಗಳಿವೆ. ಇಂಥಹ ಅಪರೂಪದ ಪಪ್ಪಾಯಿ ಮರ ಇರೋದು ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆರವಲಿ ಮಂಡಲದ ಖಂಡವಳ್ಳಿ ಮತ್ತು ಅನ್ನಾವರಪ್ಪಡು ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ.
ಈ ಮರ ಇಷ್ಟೊಂದು ಹಣ್ಣುಗಳನ್ನು ಬಿಡಲು ಕಾರಣ ಅದಕ್ಕಿರುವ ಕೊಂಬೆಗಳು ಅಥವಾ ಟಿಸಿಲುಗಳು. ಸುಮಾರು 15 ಟಿಸಿಲುಗಳು ಈ ಮರಕ್ಕಿದ್ದು, ಎಲ್ಲಾ ಟಿಸಿಲುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳಿವೆ. ಖಂಡವಳ್ಳಿ ಗ್ರಾಮದ ರೈತರ ಕೃಷಿ ಭೂಮಿಯ ಗಡಿಯಲ್ಲಿ ಈ ಮರವಿದ್ದು, ಯಾವುದೇ ಗೊಬ್ಬರವನ್ನು ಈ ಮರಕ್ಕೆ ನೀಡಿಲ್ಲ ಎಂಬುದು ಅಚ್ಚರಿಯ ಸಂಗತಿ.