ಕರ್ನಾಟಕ

karnataka

ETV Bharat / bharat

ಗುಂಡು ತಗುಲಿ ಗಾಯಗೊಂಡ ಮಹಿಳೆ.. ಆಸ್ಪತ್ರೆಯಲ್ಲಿ ವಿಷಯ ಮುಚ್ಚಿಟ್ಟ ಪತಿ.. ಮುಂದುವರೆದ ಪೊಲೀಸ್​​ ತನಿಖೆ.. - Women sustained bullet injury

ಪೊಲೀಸರಿಗೆ ಮಾಹಿತಿ ದೊರೆತ ಕೂಡಲೇ ಪೊಲೀಸ್ ತಂಡವು ಗಾಯಗೊಂಡ ಮಹಿಳೆಯ ಮನೆ ಬಳಿ ತಲುಪಿ ಪರಿಶೀಲಿಸಿದ್ದಾರೆ. ಆ ಸಂದರ್ಭ ಸಿಕ್ಕ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಸಂಬಂಧ ತನಿಖೆ ಮುಂದುವರೆಯುತ್ತಿದೆ..

Women sustained bullet injury during night hours, Police investigation is underway
ಗುಂಡು ತಗುಲಿ ಗಾಯಗೊಂಡ ಮಹಿಳೆ; ಆಸ್ಪತ್ರೆಯಲ್ಲಿ ವಿಷಯ ಮುಚ್ಚಿಟ್ಟ ಪತಿ - ಮುಂದುವರೆದ ಪೊಲೀಸ್​​ ತನಿಖೆ!

By

Published : Apr 17, 2021, 5:52 PM IST

ಕಾಶ್ಮೀರ: ಗುಂಡು ತಾಗಿದ್ದ ಮಹಿಳೆಗೆ ಹೃದಯ ಸಂಬಂಧಿತ ಖಾಯಿಲೆ ಇದೆ ಎಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದ್ದ ಘಟನೆ ಕಾಶ್ಮೀರ ಕಣಿವೆಯಲ್ಲಿ ನಡೆದಿದೆ.

ಡರ್ಗಾನಿ ಗುಂಡ್ ಪ್ರದೇಶದಲ್ಲಿ ಕಳೆದ ರಾತ್ರಿ ಗುಲಾಮ್​ ನಬಿ ಎಂಬುವರ ಪತ್ನಿ ಶಕೀಲಾ ಬಾನು ಅವರಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಆದ್ರೆ, ಆಕೆಯ ಪತಿ ಮತ್ತು ಸಂಬಂಧಿಕರು ಈ ಘಟನೆ ಬಹಿರಂಗಪಡಿಸದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಹೊಟ್ಟೆ ನೋವು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ವೈದ್ಯರಿಗೆ ತಿಳಿಸಿದ್ದಾರೆ. ಆದ್ರೆ, ಆ ಸ್ಥಳೀಯ ಆಸ್ಪತ್ರೆ ಸಿಬ್ಬಂದಿ ಶ್ರೀನಗರ ಎಸ್‌ಎಂಹೆಚ್‌ಎಸ್‌ಗೆ ಕರೆದೊಯ್ಯಲು ತಿಳಿಸಿದ್ದು, ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಗುಂಡು ತಗುಲಿ ಆದ ಗಾಯ ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ:ಜಮ್ಮುಕಾಶ್ಮೀರ ಹಿಮಪಾತ: ಪ್ರವಾಸಿಗರ ಮನಕ್ಕೆ ಮುದ ನೀಡುತ್ತಿದೆ 'ಗುಲ್ಮಾರ್ಗ್'

ಪೊಲೀಸರಿಗೆ ಮಾಹಿತಿ ದೊರೆತ ಕೂಡಲೇ ಪೊಲೀಸ್ ತಂಡವು ಗಾಯಗೊಂಡ ಮಹಿಳೆಯ ಮನೆ ಬಳಿ ತಲುಪಿ ಪರಿಶೀಲಿಸಿದ್ದಾರೆ. ಆ ಸಂದರ್ಭ ಸಿಕ್ಕ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಸಂಬಂಧ ತನಿಖೆ ಮುಂದುವರೆಯುತ್ತಿದೆ.

ABOUT THE AUTHOR

...view details