ಆಂಧ್ರಪ್ರದೇಶ: ಚಿತ್ತೂರು ಜಿಲ್ಲೆಯ ಅತ್ರಪಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ಜರುಗಿದೆ. ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿ ತಾವೂ ಆತ್ಮಹತ್ಯೆ ಯತ್ನ ನಡೆಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಮಕ್ಕಳ ಕತ್ತು ಹಿಸುಕಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಗೃಹಿಣಿ - andrapradesh latest news
ಅತ್ರಪಲ್ಲೆ ನಿವಾಸಿಗಳಾದ ದಂಪತಿಗೆ 7 ವರ್ಷದ ಗಂಡು ಮತ್ತು 5 ವರ್ಷದ ಹೆಣ್ಣು ಮಕ್ಕಳಿದ್ದಾರೆ. ಇವರ ನಡುವೆ ಅನ್ಯೋನ್ಯತೆ ಮೂಡದೆ ಅಂದಿನಿಂದ, ದಂಪತಿಗಳ ನಡುವೆ ದಿನವೂ ಜಗಳವಾಗುತ್ತಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಗೃಹಿಣಿ ಸಾವಿನ ಕದ ತಟ್ಟಲು ಮುಂದಾಗಿದ್ದಾರೆ.
ಮಕ್ಕಳ ಕತ್ತು ಹಿಸುಕಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಗೃಹಿಣಿ
ಘಟನೆಗೆ ಕೌಟುಂಬಿಕ ಸಮಸ್ಯೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆನಂದ್ ಎಂಬುವರ ಪತ್ನಿ ಮೀನಾಕ್ಷಿ ಈ ಕೃತ್ಯ ಎಸಗಿದವರು. ಅತ್ರಪಲ್ಲೆ ನಿವಾಸಿಗಳಾದ ಇವರಿಗೆ 7 ವರ್ಷದ ಗಂಡು ಮತ್ತು 5 ವರ್ಷದ ಹೆಣ್ಣು ಮಕ್ಕಳಿದ್ದಾರೆ. ವಿವಾಹವಾದಾಗಿನಿಂದ ಇವರ ನಡುವೆ ಹೊಂದಾಣಿಕೆ ಮೂಡದೆ ಅಂದಿನಿಂದ, ದಂಪತಿಗಳ ನಡುವೆ ದಿನವೂ ಜಗಳವಾಗುತ್ತಿತ್ತು ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಂದ ಮೀನಾಕ್ಷಿ ಕೋಪಗೊಂಡು ಮಕ್ಕಳ ಕತ್ತು ಹಿಸುಕಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.