ಪ್ರಕಾಶಂ : ಪ್ರತಿನಿತ್ಯ ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿಯೊಬ್ಬಳು ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಈ ಮೂಲಕ ಅವರ ಐದು ವರ್ಷದ ಮಗು ಈಗ ಅನಾಥವಾಗಿದೆ.
ಏನಿದು ಘಟನೆ ?:ಮದ್ದಿಪಾಡು ತಾಲೂಕಿನ ಗಾಜುಲಪಾಲೇ ನಿವಾಸಿ ಕ್ರಿಷ್ಟಿಪಾಟಿ ಕೃಷ್ಣರೆಡ್ಡಿ (31) ಎಂಬಾತ ಸಂತನೂತಲಪಾಡು ನಿವಾಸಿ ರುಕ್ಮಿಣಿ ಎಂಬುವರ ಜೊತೆ 2011ರಲ್ಲಿ ಪ್ರೇಮ ವಿವಾಹಕ್ಕೆ ಕಾಲಿಟ್ಟಿದ್ದರು. ಲವ್ ಮ್ಯಾರೇಜ್ ಆದ ಈ ದಂಪತಿಗೆ ಐದು ವರ್ಷದ ಮುದ್ದಾದ ಮಗನಿದ್ದಾನೆ. ಪ್ರಸ್ತುತ ಇವರು ಸಂತನೂತಲಪಾಡು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
ಚಿತ್ರಹಿಂಸೆ :ಸಾರಾಯಿ ಚಟಕ್ಕೆ ಬಿದ್ದಿರುವ ಕೃಷ್ಣರೆಡ್ಡಿ ಹಲವಾರು ವರ್ಷಗಳಿಂದ ತನ್ನ ಹೆಂಡ್ತಿಗೆ ಕಿರುಕುಳ ನೀಡುತ್ತಾ ಬಂದಿದ್ದಾನೆ. ಕಳೆದ ಮೂರು ದಿನಗಳ ಹಿಂದಿನಿಂದಲೂ ಕೃಷ್ಣಾರೆಡ್ಡಿ ತನ್ನ ಹೆಂಡ್ತಿ ರುಕ್ಮಿಣಿಗೆ ಶಾರೀರಿಕವಾಗಿ ಚಿತ್ರಹಿಂಸೆ ನೀಡುತ್ತಾ ಬಂದಿದ್ದಾನೆ. ಹೀಗಾಗಿ, ಇಬ್ಬರ ಮಧ್ಯೆ ಜಗಳ ಹೆಚ್ಚಾಗ ತೊಡಗಿತು.