ದಿಂಡೋರಿ (ಮಧ್ಯಪ್ರದೇಶ) : ನಿರ್ಮಾಣ ಕಂಪನಿಯ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡ ನಂತರ ದಿಂಡೋರಿ ಜಿಲ್ಲೆಯ ಶಹಪುರದಲ್ಲಿನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಕಾಜಲ್ ಜವ್ಲಾ ಅವರಿಗೆ ವಾಟ್ಸ್ಆ್ಯಪ್ನಲ್ಲಿ ಬೆದರಿಕೆ ಕರೆ ಬಂದಿವೆ.
ಬೆದರಿಕೆ ಸಂದೇಶದ ಬಗ್ಗೆ ಕಾಜಲ್ ಡಿಂಡೋರಿ ಕಲೆಕ್ಟರ್ ವಿಕಾಸ್ ಮಿಶ್ರಾ ಅವರಿಗೆ ಮಾಹಿತಿ ನೀಡಿದ್ದು, ಅವರು ನೀಡಿದ ದೂರಿನ ಆಧಾರದ ಮೇಲೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ನಂತರ ಠಾಣಾಧಿಕಾರಿ ಅಖಿಲೇಶ್ ದಹಿಯಾ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಡಿಎಂ ಕಾಜಲ್ ಜವ್ಲಾ, ಜಬಲ್‌ಪುರ ಜಿಲ್ಲೆಯ ಕುಂಡಮ್‌ನಿಂದ ದಿಂಡೋರಿ ಜಿಲ್ಲೆಯ ಶಹಪುರ ತಹಸಿಲ್‌ವರೆಗೆ ರಾಷ್ಟ್ರೀಯ ಹೆದ್ದಾರಿಯ ನಾಲ್ಕು ಪಥಗಳ ನಿರ್ಮಾಣದ ಯೋಜನೆ ಕೈಗೊಂಡಿರುವ ನಿರ್ಮಾಣ ಕಂಪನಿಯು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದೆ. ಈ ಹಿಂದೆ ಜಬಲ್‌ಪುರ-ಅಮರಕಂಟಕ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೇ ಕನಿಷ್ಠ 10 ರಿಂದ 12 ಮರಗಳನ್ನು ಕಡಿಯಲಾಗಿದೆ ಎಂಬ ಆರೋಪವೂ ಗುತ್ತಿಗೆದಾರರ ಮೇಲಿತ್ತು. ಇದಕ್ಕಾಗಿ ಗುತ್ತಿಗೆದಾರನಿಗೆ ಡಿಸಿ 54,000 ರೂ. ದಂಡವನ್ನು ವಿಧಿಸಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಇಸ್ಕಾನ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಈಗಾಗಲೇ ದೂರು ಸ್ವೀಕರಿಸಿದ್ದೇವೆ ಎಂದು ಕಾಜಲ್ ಹೇಳಿದ್ದಾರೆ.
ಇದನ್ನೂ ಓದಿ :ಬಿಹಾರದ ಗಲಭೆಕೋರರ ಗಲ್ಲಿಗೇರಿಸುವ ಶಾ, ಗುಜರಾತ್ನ ಅತ್ಯಾಚಾರಿಗಳಿಗೆ ಲಡ್ಡು ತಿನ್ನಿಸುತ್ತಿದ್ದಾರೆ: ಸಂಸದೆ ಮಹುವಾ ವಾಗ್ದಾಳಿ