ಕರ್ನಾಟಕ

karnataka

ETV Bharat / bharat

ಗಂಡನ ಅಂತಿಮ ಸಂಸ್ಕಾರವನ್ನು ತಾನೇ ನೆರವೇರಿಸಿದ ಪತ್ನಿ - ಪತ್ನಿಯಿಂದಲೇ ಪತಿಯ ಅಂತ್ಯಸಂಸ್ಕಾರ

ಹಿಂದೂ ಧರ್ಮದ ವಿಧಿವಿಧಾನಗಳಂತೆ ಗಂಡನ ಮರಣದ ನಂತರ, ಹೆಂಡತಿ ಆತನ ಅಂತ್ಯಕ್ರಿಯೆಯ ವಿಧಿಗಳ ಆಚರಣೆಗೆ ಸ್ಮಶಾನಕ್ಕೆ ಹೋಗುವುದಿಲ್ಲ. ಆದರೆ, ಬಿಹಾರ ಮೂಲದ ಮಹಿಳೆಯೊಬ್ಬಳು ತನ್ನ ಗಂಡನ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಮೂಲಕ ಹಳೆಯ ಹಿಂದೂ ಸಂಪ್ರದಾಯಗಳನ್ನು ಮುರಿದಿದ್ದಾರೆ.

last rites
last rites

By

Published : May 8, 2021, 3:16 PM IST

ಖಾಗರಿಯಾ : ಬಿಹಾರದ ಖಾಗರಿಯಾ ಜಿಲ್ಲೆಯ ಮಹಿಳೆಯೊಬ್ಬಳು ತನ್ನ ಗಂಡನ ಅಂತಿಮ ವಿಧಿಗಳನ್ನು ತಾವೇ ನೆರವೇರಿಸಿದ್ದಾರೆ. ಸಾಮಾನ್ಯವಾಗಿ ಇದನ್ನು ಕುಟುಂಬದ ಪುರುಷ ಸದಸ್ಯರು ಮಾಡುತ್ತಾರೆ.

ಮೀನಾ ದೇವಿ ಎಂಬುವವರ ಪತಿ ಕೃಷ್ಣಾನಂದ್ ಮಿಶ್ರಾ ಅವರು ಅನಾರೋಗ್ಯದ ಹಿನ್ನೆಲೆ ಸಾವನ್ನಪ್ಪಿದ್ದು, ಈ ದಂಪತಿಗೆ ಮಕ್ಕಳಿಲ್ಲದ ಕಾರಣ ದುಃಖತಪ್ತ ಪತ್ನಿ ಮೀನಾ ತಾವೇ ಗಂಡನ ಅಂತ್ಯಸಂಸ್ಕಾರ ವಿಧಿವಿಧಾನಗಳನ್ನ ಪೂರೈಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೀನಾ, ಅಂತ್ಯಕ್ರಿಯೆಯ ವಿಧಿಗಳಲ್ಲಿ ನಡೆಯುವ ಆಚರಣೆಗಳ ಬಗ್ಗೆ ನನಗೆ ತಿಳಿದಿತ್ತು. ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಮೃತನ ಪತ್ನಿ ಶವಸಂಸ್ಕಾರಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ. ಆದರೆ, ನನ್ನ ಗಂಡನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯವು ಅಂತಿಮ ವಿಧಿಗಳನ್ನು ಮಾಡುವ ಧೈರ್ಯವನ್ನು ನೀಡಿತು ಎಂದು ಹೇಳಿದ್ದಾರೆ.

ABOUT THE AUTHOR

...view details