ಹೈದರಾಬಾದ್(ತೆಲಂಗಾಣ) :ಮುತ್ತಿನ ನಗರಿಯಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ನಡೆದಿದೆ. ಇಲ್ಲಿನ ಮೀರ್‌ಪೇಟ್‌ನಲ್ಲಿ ಮಹಿಳೆಯೋರ್ವಳ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 35 ವರ್ಷದ ನಗರ ನಿವಾಸಿ ಮಹಿಳೆಯೊಬ್ಬಳು ಗುರುವಾರ ಸಂಜೆ ಯಾವುದೋ ಕೆಲಸದ ನಿಮಿತ್ತ ಕೋಠಿ ನಗರಕ್ಕೆ ತೆರಳಿದ್ದರು. ಅಲ್ಲಿ ಆಕೆ ಮೇಲೆ ಈ ಕಾಮುಕರು ದುಷ್ಕೃತ್ಯವೆಸಗಿದ್ದಾರೆ.
ಕೆಲಸ ಮುಗಿಸಿ ಮನೆಗೆ ಮರಳಲು ಬಸ್‌ಗಾಗಿ ಕಾಯುತ್ತಿದ್ದಾಗ. ಆಟೋ ಚಾಲಕ ಅಖಿಲ್ (19) ಎಂಬಾತ ಬಸ್ ಸ್ಟಾಪ್ಗೆ ಬಂದು ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾನೆ. ಆಗ ಮಹಿಳೆ ತಮ್ಮ ನಗರದ ವಿಳಾಸ ಹೇಳಿದ್ದಾರೆ. ನಾನು ಸಹ ನಿಮ್ಮ ನಗರದ ಕಡೆಯೇ ಹೋಗುತ್ತಿರುವುದಾಗಿ ಹೇಳುತ್ತಿದ್ದಂತೆ ಮಹಿಳೆ ಆಟೋ ಹತ್ತಿದ್ದಾರೆ.
ಓದಿ:Watch.. ನಿತ್ಯ ದೇವಸ್ಥಾನಕ್ಕೆ ಆಗಮಿಸಿ, ಘಂಟೆ ಬಾರಿಸುವ ಮೇಕೆ.. ಜನರಲ್ಲಿ ಅಚ್ಚರಿ..!
ಡ್ರೈವರ್ ಅಖಿಲ್ ಆಟೋವನ್ನು ಗಾಯತ್ರಿನಗರ ಬಳಿಯ ಬಾರ್‌ನ ಹಿಂಭಾಗದಲ್ಲಿ ನಿಲ್ಲಿಸಿದ್ದಾನೆ. ಬಳಿಕ ತನ್ನ ಸ್ನೇಹಿತರಾದ ನಿತಿನ್ (19), ಪ್ರಶಾಂತ್ (21) ಮತ್ತು ಶ್ರೀನುಗೆ ಎಂಬುವರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದಾನೆ. ಬಳಿಕ ನಾಲ್ವರು ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳದಲ್ಲಿ ಸಂತ್ರಸ್ತೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಸ್ವಲ್ಪ ಸಮಯದ ನಂತರ ಆಕೆಗೆ ಪ್ರಜ್ಞೆ ಬಂದಿದೆ. ಬಳಿಕ ನೇರ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ನೀಡಿದ ಮೀರಪೇಟ್ ಇನ್ಸ್ಪೆಕ್ಟರ್ ಮಹೇಂದರ್ ರೆಡ್ಡಿ, ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದೇವೆ. ಆರೋಪಿ ಶ್ರೀನು ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಓದಿ:‘ಪೆಟ್ರೋಲ್ ಖಾಲಿಯಾಗಿದೆ ಮೇಡಂ’ ಅಂತಾ ಫ್ರೆಂಡ್ಸ್ ಕರೆಸಿದ ಆಟೋ ಚಾಲಕ.. ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!