ರಾಂಚಿ (ಜಾರ್ಖಂಡ್)ರಾಜಧಾನಿಯಲ್ಲಿ ಮಹಿಳಾ ಡಿಎಸ್‌ಪಿ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇಬ್ಬರು ಪೊಲೀಸರೂ ಭಾಗಿಯಾಗಿದ್ದು ಅಚ್ಚರಿಯ ಸಂಗತಿಯಾಗಿದೆ. ಸದ್ಯ ಮಹಿಳಾ ಡಿಎಸ್ಪಿ ಎಲ್ಲ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ:ಯುವಕ ಗುಂಪೊಂದು ಕುಡಿದ ಮತ್ತಿನಲ್ಲಿ ಅಶ್ಲೀಲ ಹಾಡುಗಳೊಂದಿಗೆ ತಡರಾತ್ರಿವರೆಗೂ ಮೆರವಣಿಗೆ ನಡೆಸುತ್ತಿದ್ದರು. ಸ್ಥಳಕ್ಕೆ ಬಂದ ಡಿಎಸ್‌ಪಿ ಯುವಕರಿಗೆ ಸ್ವಲ್ಪ ಏರುಧ್ವನಿಯಲ್ಲಿ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೇ ದೊಡ್ಡ ಕಾರಣವಾಗಿ ಮಾಡಿಕೊಂಡ ಯುವಕರ ಡಿಎಸ್‌ಪಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದ ಮಹಿಳಾ ಡಿಎಸ್‌ಪಿ ಗುಂಪಿನಲ್ಲಿದ್ದ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಸಿಟ್ಟಾದ 10-15 ಇದ್ದ ಯುವಕರು ಡಿಎಸ್‌ಪಿ ಅವರನ್ನು ಎಳೆದಾಡುವುದು ನೂಕಾಡುವುದು ಮಾಡಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಅವರನ್ನು ಪಾರು ಮಾಡಿದ್ದಾರೆ.
ಪೊಲೀಸರ ಪ್ರಚೋದನೆ: ವಿನೋದ್ ಪಾಂಡೆ ಮತ್ತು ಸಿಪಿ ಉಪಾಧ್ಯಾಯ ಎಂಬ ಪೊಲೀಸ್ ಸಿಬ್ಬಂದಿ ತನಗೆ ಕಿರುಕುಳ ನೀಡುತ್ತಿದ್ದ ಯುವಕರನ್ನು ಪ್ರಚೋದಿಸಿದ್ದಾರೆ. ಆ ಇಬ್ಬರೂ ಕಾನ್ಸ್ಟೇಬಲ್ಗಳು ತನಗೆ ಸಹಾಯ ಮಾಡುವ ಬದಲು ಥಳಿಸುವಂತೆ ಕುಡುಕ ಯುವಕರನ್ನು ಪ್ರೇರೇಪಿಸುತ್ತಿದ್ದರು ಎಂದು ಡಿಎಸ್ಪಿ ತಮ್ಮ ದೂರು ಪ್ರತಿಯಲ್ಲಿ ದಾಖಲು ಮಾಡಿದ್ದಾರೆ.
ಎಫ್‌ಐಆರ್ ದಾಖಲು: ಕಿರುಕುಳ ಮತ್ತು ಹಲ್ಲೆ ನಂತರ ಮಹಿಳಾ ಡಿಎಸ್‌ಪಿ ಲೋವರ್ ಬಜಾರ್ ಠಾಣೆಗೆ ತಲುಪಿ ಕಾನ್ಸ್ಟೇಬಲ್ ವಿನೋದ್, ಪಾಂಡೆ ಸಿಪಿ ಉಪಾಧ್ಯಾಯ ಸೇರಿದಂತೆ 15 ಅಪರಿಚಿತ ಯುವಕರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ಠಾಣೆಯಲ್ಲಿ ಹಲ್ಲೆ ಮತ್ತು ಕಿರುಕುಳದ ವಿಡಿಯೋ ಸಹ ನೀಡಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ಮಂತ್ರಿ ಮಗನಿಂದಲೇ ಕೇಸರಿ ಶಾಲು, ಪೇಟ ಹಂಚಿಕೆ : ಡಿಕೆಶಿ ಆರೋಪ
ವಿಡಿಯೋ ಆಧರಿಸಿ ಕಿರುಕುಳ ನೀಡಿದ ಯುವಕರನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಲೋವರ್ ಬಜಾರ್ ಪೊಲೀಸ್ ಠಾಣೆ ಪ್ರಭಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.