ಲಕ್ನೋ: ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ 28 ವಯಸ್ಸಿನ ಯುವತಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ. ಮೃತಪಟ್ಟ ಮಹಿಳೆಯನ್ನು ಪ್ರಿಯಾಂಕಾ ಶ್ರೀವಾಸ್ತವ ಎಂದು ಗುರುತಿಸಲಾಗಿದೆ. ಲಕ್ನೋದ ಕೃಷ್ಣನಗರ ಪ್ರದೇಶದಲ್ಲಿ ವಾಸವಿದ್ದ ಬಾಡಿಗೆ ಕೋಣೆಯಲ್ಲಿ ಸೋಮವಾರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಹೋದರ ತನ್ನಿಚ್ಛೆಗೆ ವಿರುದ್ಧವಾಗಿ ಮದುವೆ ನಿಗದಿಪಡಿಸಿದ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳಂತೆ. ಆಕೆಯ ಮದುವೆಗೆ ಕೇವಲ ಎರಡು ವಾರಗಳು ಮಾತ್ರ ಬಾಕಿ ಇತ್ತು ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
"ಬೈ-ಬೈ ಫ್ಯಾಮಿಲಿ ಮೆಂಬರ್ಸ್, ಅಬ್ ಕರ್ಲೋ ಶಾದಿ":ಈಕೆಯ ಪೋಷಕರು ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಯುವತಿಯ ಕೊಠಡಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡುವ ಮುನ್ನ ಬರೆದಿಟ್ಟ ಡೆತ್‌ನೋಟ್ ದೊರಕಿದ್ದು, ಅದರಲ್ಲಿ "ಬೈ-ಬೈ ಫ್ಯಾಮಿಲಿ ಮೆಂಬರ್ಸ್, ಅಬ್ ಕರ್ಲೋ ಶಾದಿ"(ಕುಟುಂಬ ಸದಸ್ಯರಿಗೆ ಬೈ ಬೈ, ಈಗ ಮದುವೆ ಮಾಡಿ) ಎಂದು ಉಲ್ಲೇಖಿಸಿದ್ದಾಳೆ.
ಪ್ರಿಯಾಂಕಾ ಶ್ರೀವಾಸ್ತವ ತಮ್ಮ ಬಾಡಿಗೆ ಫ್ಲಾಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು. ಜೊತೆಗೆ ಆಕೆಯ ಮದುವೆಯನ್ನು ನವೆಂಬರ್ 25 ಕ್ಕೆ ನಿಗದಿಪಡಿಸಲಾಗಿತ್ತು ಎಂದು ಕೃಷ್ಣಾನಗರದ ಎಸ್‌ಎಚ್‌ಒ ವಿಕ್ರಮ್ ಸಿಂಗ್ ಮಾಹಿತಿ ನೀಡಿದರು.
ಇದನ್ನೂ ಓದಿ:ಮಹಿಳೆಯ ಅರೆ ಬೆತ್ತಲೆ ಶವ ಪತ್ತೆ: ಅತ್ಯಾಚಾರಗೈದು ಕೊಲೆ ಶಂಕೆ