ವಿಜಯವಾಡ(ಆಂಧ್ರಪ್ರದೇಶ):ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಆರ್‌ಟಿಸಿ ಬಸ್ ಚಾಲಕನನ್ನು ನಿಂದಿಸಿ, ಥಳಿಸಿರುವ ಘಟನೆ ಫೆಬ್ರವರಿ 9 ರಂದು ಆಂಧ್ರಪ್ರದೇಶದ ವಿಜಯವಾಡದ ಮಾರ್ಗ ಸಂಖ್ಯೆ 5ರ ಸೂರ್ಯರಾವ್‌ಪೇಟೆಯಲ್ಲಿ ನಡೆದಿದೆ.
ಬಸ್ ಚಾಲಕನನ್ನು ಥಳಿಸಿದ ಮಹಿಳೆ! ನಗರದ ಅತ್ಯಂತ ಜನನಿಬಿಡ ರಸ್ತೆಯಲ್ಲಿ ಮಹಿಳೆ ತನ್ನ ಸ್ಕೂಟಿ ಮೂಲಕ ರಸ್ತೆ ದಾಟುವ ವೇಳೆ, ಅವರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ, ಮಹಿಳೆ ರಸ್ತೆಗೆ ಬಿದ್ದಿದ್ದಾರೆ. ಅಪಘಾತದ ವೇಳೆ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ಮದುವೆಯಾಗಲು ತಯಾರಿ ನಡೆಸಿದ್ದ ಹೆಡ್ಕಾನ್ಸ್ಟೇಬಲ್ ಗನ್ ಮಿಸ್ಫೈರ್ನಿಂದ ಮೃತ
ಆದರೆ ಮಹಿಳೆ, ಬಸ್ ಚಾಲಕನನ್ನು ನಿಂದಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಯ ಅಸಭ್ಯ ವರ್ತನೆಯಿಂದ ಆಘಾತಕ್ಕೊಳಗಾದ ಕೆಲ ಪ್ರಯಾಣಿಕರು ಚಾಲಕನಿಗೆ ಹೊಡೆಯುವುದನ್ನು ನಿಲ್ಲಿಸುವಂತೆ ಮಹಿಳೆಯನ್ನು ಕೇಳಿಕೊಂಡರು. ಆದರೂ ಆಕೆ ದೌರ್ಜನ್ಯ ಎಸಗುವುದನ್ನು ಮತ್ತು ಅಸಭ್ಯ ಭಾಷೆ ಬಳಸುವುದನ್ನು ಮುಂದುವರೆಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.